ಬೆಂಗಳೂರು : ತಡರಾತ್ರಿ ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮಗು ಸೇರಿದಂತೆ ಕುಟುಂಬಸ್ಥರೆಲ್ಲರೂ ಅಪಾಯದಿಂದ ಪಾರಾಗಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.
2022ರಲ್ಲಿ ‘ಕುಕ್ಕರ್ ಬಾಂಬ್’ ಸ್ಪೋಟಿಸಿದಾಗ ಬಿಜೆಪಿಯವರು ರಾಜೀನಾಮೆ ಕೊಟ್ಟಿದ್ದಾರಾ? : ಗೃಹ ಸಚಿವ ಜಿ.ಪರಮೇಶ್ವರ್
ನಡು ರಸ್ತೆಯಲ್ಲಿ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು ನಾಯಂಡನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದೆ. ಫ್ಲೈ ಓವರ್ ಮೇಲೆ ಕಾರು ಚಲಿಸುತ್ತೀದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಬೇರೊಂದು ಕಾರಿನವರು ಮಾಹಿತಿ ನೀಡಿದ್ದಾಗ ಗಾಬರಿಗೊಂಡ ಕಾರಿನಲ್ಲಿದ್ದ ಐವರು ಹೊರಗಡೆ ಇಳಿದಿದ್ದರೆ.ಈ ವೇಳೆ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ರಾಜ್ಯದಲ್ಲಿ ‘ಗ್ರಾಮ ಪಂಚಾಯ್ತಿ ಸೇವೆ’ಗಳಿಗೆ ಅರ್ಜಿ ಸಲ್ಲಿಕೆ ಮತ್ತಷ್ಟು ಸರಳ: ಜಸ್ಟ್ ‘ವಾಟ್ಸಾಪ್’ ಮಾಡಿ ಸಾಕು
ರಾತ್ರಿ 12:30 ಕ್ಕೆ ಚನ್ನಪಟ್ಟಣಕ್ಕೆ ಕುಟುಂಬ ಸಮೇತ ತೆರಳುತ್ತಿತ್ತು .ಕಾರಿನಲ್ಲಿ ಮಗು ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದೆ. ಕಾರಿನ ಹಿಂಬದಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ಬೇರೊಂದು ಕಾರಿನಲ್ಲಿ ಸಂಚರಿಸುವವರು ಕಾರಿನಲ್ಲಿ ಇದ್ದವರಿಗೆ ಬೆಂಕಿ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಕಿ ಮೊದಲೆ ಇವರು ಕಾರಿನಿಂದ ಕೆಳಗೆ ಇಳಿದಿದ್ದರು. ಅದೃಷ್ಟವಶಾತ್ ಪ್ರಾಣ ಅಪಾಯದಿಂದ ಎಲ್ಲರೂ ಪಾರಾಗಿದ್ದಾರೆ.
ರಾಜ್ಯ ಸಾರಿಗೆಗೆ ಐದು ರಾಷ್ಟ್ರೀಯ ಸಾರ್ವಜನಿಕ ‘ಸಾರಿಗೆ ಪ್ರಶಸ್ತಿಗಳ ಗರಿ’ | National public transport awards