ಮೈಸೂರು : ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಕ್ಷಣ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಕಾರು ಸಂಪೂರ್ಣವಾಗಿ ಬೆಂಕಿ ಗಾಹುಯಾಗಿರುವ ಘಟನೆ ದಟ್ಟಗಳ್ಳಿ ರಿಂಗ್ ರಸ್ತೆಯ ಸಾ.ರಾ ಕನ್ವೆನ್ಷನ್ ಹಾಲ್ ಎದುರು ಭಾನುವಾರ ಬೆಳಗ್ಗೆ ಸಂಭವಿಸಿದೆ.
‘RRB’ ಯಿಂದ 4660 SI, ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಕರೆದಿಲ್ಲ, ಪಿಐಬಿ ಫ್ಯಾಕ್ಟ್ ಚೆಕ್ ಮಹತ್ವದ ಹೇಳಿಕೆ!
ಕುವೆಂಪು ನಗರದ ನಿವಾಸಿ ಚಂದ್ರು ಹಾಗೂ ಪತ್ನಿ ನೇಹಾ ಎಂಬ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಂದ್ರು- ನೇಹಾ ದಂಪತಿ ಕಾರಿನಲ್ಲಿ ದಟ್ಟಗಳ್ಳಿ ಕಡೆ ತೆರಳುತ್ತಿದ್ದರು. ಈ ವೇಳೆ ಕಾರಿನ ಟೈರ್ ಸ್ಫೋಟಗೊಂಡಿದೆ. ಇದರಿಂದ ಕಾರು ಚಾಲನೆಯಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಸ್ತೆ, ಚರಂಡಿ, ದೀಪ ಅಳವಡಿಸಲು ಬಿಜೆಪಿ ಆಡಳಿತಕ್ಕೆ ಬರಲ್ಲ ‘ಧರ್ಮ-ದೇಶ’ಕ್ಕಾಗಿ ಬರುತ್ತೆ : ಕೆ.ಎಸ್ ಈಶ್ವರಪ್ಪ
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ತಕ್ಷಣ ದಂಪತಿಗಳು ಕಾರಿನಿಂದ ಇಳಿದಿದ್ದಾರೆ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದೆ.ಕಾರು ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಕೂಡ ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೆ.ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಕ್ ಪರ ಘೋಷಣೆ ಕೂಗಿರುವುದು ಧೃಡ: ‘ಟ್ವಿಟರ್’ನಲ್ಲಿ ವರದಿ ಹಂಚಿಕೊಂಡ ರಾಜ್ಯ ಬಿಜೆಪಿ!