ಚಿಕ್ಕಮಗಳೂರು : ಚಿಕ್ಕಮಂಗಳೂರಲ್ಲಿ ಭೀಕರವಾದಂತ ಅಪರಾಧ ಸಂಭವಿಸಿದ್ದು ಚಿಕ್ಕಮಂಗಳೂರು ಜಿಲ್ಲೆಯ ಹಿರೇಮಂಗಳೂರು ಸಮೀಪ ರೈಲ್ವೆ ಬ್ರಿಡ್ಜ್ ಬಳಿ ಕಾರು ಮತ್ತು ಬೈಕ್ ಮುಖಾಂತರ ಡಿಕ್ಕಿ ಹೊಡಿದಿವೆ. ಈ ಒಂದು ಅಪಘಾತದಲ್ಲಿ ಇಬ್ಬರಿಗೆ ಗಂಭೀರವಾದಗಳಾಗಿದ್ದು ಇಬ್ಬರ ಆರೋಗ್ಯ ಸ್ಥಿತಿ ಕೂಡ ಇದೀಗ ಚಿಂತಾಜನಕವಾಗಿದೆ ಎನ್ನಲಾಗಿದೆ.
ಹೌದು ಚಿಕ್ಕಮಂಗಳೂರಿನ ಹಿರೇಮಗಳೂರು ರೈಲ್ವೆ ಬ್ರಿಡ್ಜ್ ಬಳಿ ಒಂದು ಅಪಘಾತ ಸಂಭವಿಸಿದೆ. ಚಿಕ್ಕಮಂಗಳೂರಿನ ಕೋಟೆ ಪ್ರದೇಶ ನಿವಾಸಿ ಚಿರಂತ (35) ತೆಗುರು ಗ್ರಾಮದ ನಿವಾಸಿ ತೇಜಸ್ (24) ಗಂಭೀರವಾದ ಗಾಯ ಆಗಿದೆ. ರೈಲ್ವೆ ಬ್ರಿಡ್ಜ್ ಡಿಕ್ಕಿಯಾಗಿ ಕಾರು ಬಿದ್ದು ನುಜ್ಜುಗುಜ್ಜಾಗಿದೆ. ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಮಂಗಳೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.