ಶಿವಮೊಗ್ಗ : ಶಿವಮೊಗ್ಗದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಚಲಿಸುತ್ತಿದ್ದ ಟ್ಯಾಂಕರ್ ಗೆ ವಿದ್ಯುತ್ ತಂತಿ ತಗುಲಿ ಕ್ಯಾಂಟರ್ ಚಾಲಕ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದೆ.
ಮೃತ ಕ್ಯಾಂಟರ್ ಚಾಲಕನನ್ನು ಶಿರಾಳಕೊಪ್ಪದ ಮಠದಗದ್ದೆ ನಿವಾಸಿ ಮೊಹಮ್ಮದ್ ಈಶಾಮ್ (32) ಎಂದು ತಿಳಿದುಬಂದಿದೆ. ಡಿ.5ರಂದು ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಿಂದ ಸೊರಬ ತಾಲೂಕಿನ ಸುತ್ತಕೋಟೆಗೆ ತೆರಳುವ ರಸ್ತೆಮಾರ್ಗದಲ್ಲಿ ಸಾಸರಹಳ್ಳಿ ಸಮೀಪ ಜೋತು ಬಿದ್ದ ವಿದ್ಯುತ್ ತಂತಿ ಕ್ಯಾಂಟರ್ಗೆ ತಗುಲಿದೆ.
ಈ ಒಂದು ದುರ್ಘಟನೆಗೆ ಮೆಸ್ಕಾಂ ಸಿಬ್ಬಂದಿ ಮತ್ತು ಅಧಿಕಾರಿಗಳೇ ಕಾರಣ ಎಂದು ಗ್ರಾಮದ ಜನರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೊರಬ ಪೊಲೀಸ್ ಠಾಣೆಯಲ್ಲಿ ಮೃತ ಮೊಹಮ್ಮದ್ ಈಶಮ್ ಅವರ ತಂದೆ ರಿಯಾಜ್ ಮೆಸ್ಕಾಂ ವಿರುದ್ಧ ದೂರು ನೀಡಿದ್ದಾರೆ.