ಬೆಂಗಳೂರು : ಬಿಜೆಪಿ ಅವಧಿಯ 40% ಕಮಿಷನ್ ಆರೋಪದ ವಿಚಾರವಾಗಿ ನಾಗಮೋಹನ್ ದಾಸ್ ವರದಿಯನ್ನು ಇದೀಗ ಸಂಪುಟ ಸಭೆ ಅಂಗೀಕರಿಸಿದೆ.ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿಯನ್ನು ಆಧರಿಸಿ ಇದೀಗ ಸಂಪುಟ ಸಭೆ ಎಸ್ಐಟಿ ರಚನೆಗೆ ನಿರ್ಧಾರ ಕೈಗೊಂಡಿದೆ. ಬಿಜೆಪಿ ಅವಧಿಯ 40% ಕಮಿಷನ್ ಆರೋಪದ ವಿಚಾರವಾಗಿ ಇದೀಗ ಎಸ್ಐಟಿ ರಚನೆ ಮಾಡಲು ನಿರ್ಧರಿಸಿದೆ.
ಹೌದು ಕಳೆದ ಬಿಜೆಪಿ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರರಿಂದ 40% ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಲು ಕ್ಯಾಬಿನೆಟ್ ನಿರ್ಧರಿಸಿದೆ.
ಹೌದು ನಾಗಮೋಹನ ದಾಸ್ ವರದಿಯನ್ನು ಅಂಗೀಕರಿಸಿದ ಸಂಪುಟ ಸಭೆ, ನಾಗಮೋಹನ ದಾಸ್ ಸಮಿತಿ ವರದಿ ಆಧರಿಸಿ SIT ರಚನೆಗೆ ನಿರ್ಧಾರ ಕೈಗೊಂಡಿದೆ. ಗುತ್ತಿಗೆದಾರರ ಸಂಘದ ಆರೋಪ ಬಗ್ಗೆ ತನಿಖೆಗೆ ಎಸ್ಐಟಿ ರಚನೆಗೆ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. ವಿಶೇಷ ತನಿಖಾ ತಂಡ ರಚಿಸಲು ಸಂಪುಟ ಸಭೆ ನಿರ್ಧರಿಸಿದ್ದು, ಈ ಕುರಿತು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬೀಳಬೇಕಷ್ಟೆ.