ಚಾಮರಾಜನಗರ : ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಟ್ಟು ಕೊಡಲ್ಲ. ಡಿಕೆ ಶಿವಕುಮಾರ್ ಸುಮ್ಮನಿರಲ್ಲ. ಇವರಿಬ್ಬರ ತಿಕ್ಕಾಟದ ಮಧ್ಯೆ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ. ಕರ್ನಾಟಕ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿದೆ. ಚುನಾವಣೆಯನ್ನು ಎದುರಿಸಲು ಬಿಜೆಪಿ ಜೆಡಿಎಸ್ ಸಿದ್ಧವಿದೆ. ಬಿಜೆಪಿ ಜೆಡಿಎಸ್ ಒಟ್ಟಾಗಿ ಮುಂಬರುವ ಚುನಾವಣೆ ಎದುರಿಸಲಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದರು.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಬಿಹಾರ್ ಚುನಾವಣೆ ಬಳಿಕ ರಾಹುಲ್ ಗಾಂಧಿ ಡಮ್ಮಿ ಆಗಿದ್ದಾರೆ. ಇನ್ಮೇಲೆ ರಾಜ್ಯದಲ್ಲಿ ಏನಿದ್ರೂ ಸಿಎಂ ಸಿದ್ದರಾಮಯ್ಯ ಅವರದ್ದೇ ಪ್ರಾಬಲ್ಯ. ಡಿಸಿಎಂ ಡಿಕೆ ಅಸ್ತ್ರ ಬಿಹಾರ್ ಚುನಾವಣೆಯಲ್ಲಿ ವರ್ಕ್ ಔಟ್ ಆಗಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಶಿವ ಹಾಗು ವಿಷ್ಣುವನ್ನು ನೋಡಿದ್ರು ಈಗ ಬ್ರಹ್ಮನನ್ನು ನೋಡುವುದೊಂದೇ ಬಾಕಿ ಎಂದು ತಿಳಿಸಿದರು.
ಬಿಹಾರ್ ಚುನಾವಣೆ ಫಲಿತಾಂಶ ಎಲ್ಲವು ಉಲ್ಟಾ ಆಗೋಗಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಮಾತ್ರ ಪ್ರಾಬಲ್ಯವಾಗಿದೆ. ಚುನಾವಣೆ ಫಲಿತಾಂಶ ಬಳಿಕ ಸಿದ್ದರಾಮಯ್ಯ ಪ್ರಾಬಲ್ಯರಾಗಿದ್ದಾರೆ. ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಟ್ಟು ಕೊಡಲ್ಲ. ಡಿಕೆ ಶಿವಕುಮಾರ್ ಸುಮ್ಮನಿರಲ್ಲ. ಇವರಿಬ್ಬರ ತಿಕ್ಕಾಟದ ಮಧ್ಯೆ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ. ಕರ್ನಾಟಕ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿದೆ. ಚುನಾವಣೆಯನ್ನು ಎದುರಿಸಲು ಬಿಜೆಪಿ ಜೆಡಿಎಸ್ ಸಿದ್ಧವಿದೆ. ಬಿಜೆಪಿ ಜೆಡಿಎಸ್ ಒಟ್ಟಾಗಿ ಮುಂಬರುವ ಚುನಾವಣೆ ಎದುರಿಸಲಿದೆ.








