ಬೆಂಗಳೂರು : ಮದ್ಯದ ಅಮಲಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಪುತ್ರ ಕಿರಿಕ್ ಮಾಡಿದ್ದು, ಕುಣಿಗಲ್ ತಹಸೀಲ್ದಾರ್ ರಶ್ಮಿ ಕಾರಿಗೆ ಅಡ್ಡ ಬಂದು ಪುಂಡಾಟ ಮೆರೆದಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಲ್ಯಾಂಕೋ ಟೋಲ್ ಬಳಿ ಈ ಒಂದು ಘಟನೆ ನಡೆದಿದೆ.
ನೆಲಮಂಗಲದ ಉದ್ಯಮಿ ಡಾಬಾ ರಾಜಣ್ಣ ಪುತ್ರ ರವಿ ಗೌಡನಿಂದ ಈ ಒಂದು ಕೃತ್ಯ ನಡೆದಿದೆ. ರವಿಗೌಡನ ಪುಂಡಾಟ ನೋಡಿ ತಕ್ಷಣ 112ಕ್ಕೆ ಕರೆ ಮಾಡಿ ತಹಶೀಲ್ದಾರ್ ರಶ್ಮಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರವಿ ಗೌಡನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಹಶೀಲ್ದಾರ್ ರಶ್ಮಿ ಕುಣಿಗಲ್ ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ನೆಲಮಂಗಲದಲ್ಲಿ ರವಿಗೌಡ ಈ ಕೃತ್ಯ ಎಸಗಿದ್ದಾನೆ.
ಆರೋಪಿ ರವಿ ಗೌಡಗೆ ಸೇರಿದ ಕಾರನ್ನು ಇದೀಗ ನೆಲಮಂಗಲ ಠಾಣೆ ಪೋಲೀಸರು ಸೀಜ್ ಮಾಡಿದ್ದಾರೆ. KA 03 MW 1 ಡಿಫೆಕ್ಟಿವ್ ನಂಬರ್ ಪ್ಲೇಟ್ ಬಳಸುತ್ತಿದ್ದ. ತಮ್ಮ ಕಾರಿಗೆ ಟೆಂಟೆಡ್ ಗ್ಲಾಸ್ ಬಳಸಿ ಆರೋಪಿ ರವಿ ಗೌಡ ಅಡ್ಡಾಡುತ್ತಿದ್ದ.ಸರ್ಕಾರಿ ಕಾರಿಗೆ ಅಡ್ಡ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಮಧ್ಯ ಸೇವಿಸಿ ಕಾರು ಚಲಾವಣೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿದೆ. ನೆಲಮಂಗಲದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರವಿಗೌಡನ ವಿರುದ್ಧ ಪ್ರಕರಣ ದಾಖಲಾಗಿದೆ.