ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿರುವ ನಡುವೆ ಬೆಂಗಳೂರಿನಲ್ಲಿ ಸಾಲಗಾರರ ಕಿರುಕುಳಕ್ಕೆ ನೊಂದು ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ರಾಜಾಜಿನಗರದಲ್ಲಿ ಸಾಲಗಾರರ ಕಿರುಕುಳಕ್ಕೆ ನೊಂದು ಉದ್ಯಮಿ ಅರುಣ್ (38) ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂಜಾ ಎಂಟ್ರಪ್ರೈಸೆಸ್ ದಿನೇಶ್ ಎಂಬುವವರ ಬಳಿ ಅರುಣ್ 6 ಲಕ್ಷ ರೂ. ಸಾಲ ಪಡೆದುಕೊಂಡಿರು ಎನ್ನಲಾಗಿದೆ. ಸಾಲ ನೀಡಲು ಅರುಣ್ ಅವರ ಕಾರನ್ನು ಶ್ಯೂರಿಟಿಯಾಗಿ ದಿನೇಶ್ ಪಡೆದಿದ್ದರು. ವಾರದ ಹಿಂದಷ್ಟೇ 1.50 ಲಕ್ಷ ರೂ ಹಣವನ್ನು ಅರುಣ್ ವಾಪಾಸ್ ಕೊಟ್ಟಿದ್ದರು ಉಳಿದ ಸಾಲ ತೀರಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಳಿದ್ದರೂ ದಿನೇಶ್ ಕಿರುಕುಳ ನೀಡಿದ್ದಾಗಿ ಅರುಣ್ ತಂದೆ ಆರೋಪಿಸಿದ್ದಾರೆ.
ಸಾಲಗಾರರ ಕಿರುಕುಳದಿಂದ ಇದೀಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅರುಣ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅರುಣ್ ತಂದೆ ಆರೋಪಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.