ಬೆಂಗಳೂರು : ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಾರೆ ಎಂದು ಹೆದರಿ ಗುಂಡು ಹಾರಿಸಿಕೊಂಡು ನಿನ್ನೆ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಆಗಿರುವ ಸಿಜೆ ರಾಯ್ ಆತ್ಮಹತ್ಯೆಗೆ ಶರಣಾಗಿದ್ದು ಇದೀಗ ಅವರು ಬರೆದಿರುವ ಡೈರಿಯಲ್ಲಿ ಹಲವು ಸ್ಪೋಟಕ ಅಂಶಗಳು ಬರೆಯಲಾಗಿದ್ದು ರಾಜ್ಯದ ಇಬ್ಬರು ಪ್ರಭಾವಿ ಶಾಸಕರ ಹೆಸರನ್ನು ತಮ್ಮ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ.
ಹೌದು ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ರಾಯ್ ಅವರಿಗೆ ಡೈರಿ ಬರೆಯುವ ಅಭ್ಯಾಸ ಇತ್ತು. ಡೈರಿಯಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಡೈರಿಯಲ್ಲಿ ಇಬ್ಬರು ಪ್ರಭಾವಿ ಶಾಸಕರ ಹೆಸರುಗಳನ್ನು ಉಲ್ಲೇಖ ಮಾಡಿದ್ದು, ಬೆಂಗಳೂರು ಮತ್ತು ಕೋಲಾರ ಜಿಲ್ಲೆಯ ಶಾಸಕರ ಹೆಸರುಗಳನ್ನು ಅವರು ಬರೆದಿದ್ದಾರೆ.
ಇದರ ಜೊತೆ ಒಬ್ಬ ಸಂಸದರ ಹೆಸರನ್ನು ಕೂಡ ಬರೆದಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಸಂಸದರು ಚಿತ್ರದ ರಂಗದ ಗಣ್ಯರ ಹೆಸರು ಅನೇಕ ನಟಿಯರು ಮೋಡಲ್ ಗಳ ಹೆಸರು ಕೂಡ ಉಲ್ಲೇಖ ಮಾಡಿದ್ದಾರೆ. ವ್ಯವಹಾರಿಕವಾಗಿ ಒಂದಷ್ಟು ವಿಚಾರಗಳು ಹಾಗು ಒಪ್ಪಂದಗಳ ಕುರಿತಂತೆ ಕೂಡ ಡೈರಿಯಲ್ಲಿ ಬರೆದಿದ್ದಾರೆ ಎಂದು ಗೊತ್ತಾಗಿದೆ.








