ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಬುಲ್ಡೋಜರ್ ಸದ್ದು ಮಾಡಿದ್ದು, ಬೆಂಗಳೂರಿನ ಗೋರಗುಂಟೆಪಾಳ್ಯ ಬಳಿ ಇರುವ ಆಶ್ರಯ ನಗರದ ಬಡಾವಣೆಯಲ್ಲಿ ಸುಮಾರು 40 ವರ್ಷಗಳಿಂದ ಇದ್ದಂತಹ 200 ಮನೆಗಳನ್ನು ನೆಲಸಮಗೊಳಿಸಲಾಗಿದೆ.
ಹೌದು ಬೆಂಗಳೂರಲ್ಲಿ ಬಿಡಿಎ 200 ಮನೆಗಳನ್ನು ನೆಲಸಮ ಮಾಡಿದೆ. ಗೊರಗುಂಟೆಪಾಳ್ಯದ ಆಶ್ರಯ ನಗರ ಬಡಾವಣೆಯಲ್ಲಿ ಬಿಡಿಎ ಆಪರೇಷನ್ ಮಾಡಿದೆ. ಗುರುಗುಂಟೆ ಪಾಳ್ಯ ಬಳಿಯ ಆಶ್ರಯ ನಗರದಲ್ಲಿ ಬಿಡಿಎ ಸದ್ದು ಮಾಡಿದೆ. ಕಳೆದ 40 ವರ್ಷಗಳಿಂದ ಇದ್ದ ಮನೆಗಳು ನೆಲಸಮವಾಗಿವೆ.
ಅನೇಕ ವರ್ಷಗಳಿಂದ ಜನರು ಇಲ್ಲಿ ಭೂ ಒತ್ತುವರಿ ಮಾಡಿಕೊಂಡು ಮನೆಗಳ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಬಿಡಿಎ ಅನೇಕ ಬಾರಿ ನೋಟಿಸ್ ಕೂಡ ನೀಡಿತ್ತು. ಜಾಗ ಖಾಲಿ ಮಾಡುವಂತೆ ನಿವಾಸಿಗಳಿಗೆ ಸೂಚನೆ ನೀಡಲಾಗಿತ್ತು.ಆದರೆ ಮನೆ ಖಾಲಿ ಮಾಡದ ಹಿನ್ನೆಲೆ ಇಂದು ಬಿಡಿಎ ಬುಲ್ಡೋಜರ್ ಸಮೇತ ಬಂದು ಮನೆಗಳನ್ನು ನೆಲಸಮ ಮಾಡಿದೆ.