ಸಾಂಬಾ : ಪಹಲ್ಗಾಮ್ ಉಗ್ರರ ದಾಳಿಗೆ ಭಾರತ ಈಗಾಗಲೇ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ, 100ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದಿದ್ದು, ಇದರ ಬೆನ್ನಲ್ಲೆ ಇದೀಗ ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್ ನಲ್ಲಿ ಬಿಎಸ್ಎಫ್ ಯೋಧರು ಮತ್ತೆ 7 ಉಗ್ರರನ್ನು ಹತ್ಯೆಗೈದಿದ್ದಾರೆ.
ಹೌದು ಜಮ್ಮು ಕಾಶ್ಮೀರದ ಸಾಂಬಾರು ಸೆಕ್ಟರ್ ನಲ್ಲಿ 7 ಉಗ್ರರ ಹತ್ಯೆಯಾಗಿದ್ದು, 7 ಭಯೋತ್ಪಾದಕರನ್ನು ಬಿ ಎಸ್ ಎಫ್ ಯೋಧರು ಹತ್ಯೆಗೈದಿದ್ದಾರೆ. ಭಾರತದ ಮೇಲೆ ಪಾಕಿಸ್ತಾನ ನಿರಂತರ ಗುಂಡಿನ ದಾಳಿ ನಡೆಸುತ್ತಿದ್ದು, ಇದರ ಲಾಭ ಪಡೆದ ಉಗ್ರರು ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ 7 ಉಗ್ರರನ್ನು ಬಿ ಎಸ್ ಎಫ್ ಹತ್ಯೆಗೈದಿದ್ದಾರೆ. ಹಾಗಾಗಿ ಸಾಂಬಾ ಸೆಕ್ಟರ್ ನಲ್ಲಿ 7 ಉಗ್ರರನ್ನು ಬಿಎಸ್ಎಫ್ ಯೋಧರು ಹತ್ಯೆಗೈದಿದ್ದಾರೆ.