ಶಿವಮೊಗ್ಗ : ಶಿವಮೊಗ್ಗದಲ್ಲಿ ಮತ್ತೊಂದು ಬರ್ಬರ ಹತ್ಯೆಯಾಗಿದ್ದು, ರಾತ್ರಿ ಪಾರ್ಟಿ ವೇಳೆ ಗಲಾಟೆಯಾಗಿ ಸ್ನೇಹಿತನೆ ಯುವಕನ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆಯ ಇ-ಬ್ಲಾಕ್ನಲ್ಲಿ ನಡೆದಿದೆ.
ಬೊಮ್ಮನಕಟ್ಟೆ ಎ-ಬ್ಲಾಕ್ ನಿವಾಸಿ ಪವನ್ (28) ಕೊಲೆಯಾದ ಯುವಕ. ಪವನ್ ಕಳೆದ ರಾತ್ರಿ ಸ್ನೇಹಿತ ಶಿವಕುಮಾರ್ ಮನೆಯಲ್ಲಿ ಪಾರ್ಟಿಗೆ ತೆರೆಳಿದ್ದ. ಮದ್ಯ ಸೇವಿಸಿದ ಬಳಿಕ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ ಎಂದು ಆರೋಪಿಸಲಾಗಿದೆ.
ಗಲಾಟೆಯ ವೇಳೆ ಪವನ್ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ವಿನೋಬನಗರ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.