ಬೆಳಗಾವಿ : ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಉಂಟಾಗಿ, ವ್ಯಕ್ತಿಯ ಎದೆಗೆ ಸಹೋದರನೊಬ್ಬ ಕೊಡಲಿ ಇಂದ ಹಲ್ಲೆ ಮಾಡಿದ್ದು ಉದಗಟ್ಟಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಉದಗಟ್ಟಿ ಎಂಬ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಸಿದ್ದಪ್ಪ ಗೋಡೆರ್ ಎಂದು ತಿಳಿದುಬಂದಿದೆ. ಸಿದ್ದಪ್ಪನ ಎದೆಗೆ ಆತನ ಸಹೋದರರು ಕೊಡಲಿ ಇಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು, ಜಮೀನು ವಿಚಾರಕ್ಕೆ ಗಲಾಟೆ ನಡೆದಿದೆ ಕೊಡಲಿಯಿಂದ ಹಲ್ಲೆ ಮಾಡಿ ದಾಯಾದಿಗಳು ಕೊಲೆಗೆ ಯತ್ನಿಸಿದ್ದಾರೆ. ಕಬ್ಬು ಬೆಳೆದಿರುವ ಜಮೀನು ಬಿಟ್ಟು ಕೊಡುವಂತೆ ಸಿದ್ದಪ್ಪಗೆ ಸಹೋದರರು ಒತ್ತಡ ಹೇರಿದ್ದಾರೆ.
ಕಬ್ಬು ಕಟಾವು ಮಾಡಿ ಬಿಟ್ಟುಕೊಡುವುದಾಗಿ ಸಿದ್ದಪ್ಪ ಗೋಡೆರ್ ಹೇಳಿದ್ದಾರೆ. ಕಬ್ಬು ಬೆಳೆಗೆ ನೀರು ಹಾಯಿಸಲು ಬಂದಿದ್ದ ಸಿದ್ದಪ್ಪನ ಮೇಲೆ ಏಕಾಏಕಿ ಕೊಡಲಿಯಿಂದ ದಾಳಿ ಮಾಡಿದ್ದಾರೆ. ಸಿದ್ದಪ್ಪಗೋಡೆರ್ ಎದೆಗೆ ಕೊಡಲಿಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದಾರೆ. ಸಿದ್ದಪ್ಪನ ಸಹೋದರನಿಂದ ಹಲ್ಲೆ ನಡೆದಿದೆ ಎಂದು ಇದೀಗ ಕುಟುಂಬಸ್ಥರು ಆರೋಪಿಸಿದ್ದಾರೆ.ಸದ್ಯ ಸಿದ್ದಪ್ಪಗೆ ಬೆಳಗಾವಿಯ ವೈದಿಕೆ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.