ಮಡಿಕೇರಿ : ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಗಾದೆಯಂತೆ ಇದೀಗ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದ ತಮ್ಮನನ್ನೇ ಅಣ್ಣನೊಬ್ಬ ಗನ್ ನಿಂದ ಗುಂಡು ಹಾರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಭ್ಯತ್ ಮಂಗಲದಲ್ಲಿ ನಡೆದಿದೆ.
ಅಣ್ಣನಿಂದ ಹತ್ಯೆಯಾದ ತಮ್ಮನನ್ನು ಕೊಳಂಬೆ ವಿನು ಬೆಳ್ಯಪ್ಪ (53) ಎಂದು ತಿಳಿದುಬಂದಿದೆ. ಇನ್ನು ತಮ್ಮನನ್ನು ಕೊಂದವನನ್ನು ಮಣಿ ಎಂದು ತಿಳಿದುಬಂದಿದೆ.ಅಭ್ಯತ್ ಮಂಗಲದಲ್ಲಿ ತೋಟದ ಗೋದಾಮಿನಲ್ಲಿ ಪೈಪ್ ಗಳ ಪರಿಶೀಲನೆಗೆಂದು ವಿನು ಬೆಳ್ಯಪ್ಪ ತೆರಳಿದ್ದರು. ಈ ವೇಳೆ ಹಿಂದಿನಿಂದ ಬಂದ ಸಹೋದರಮಣಿ ಏಕಾಏಕಿ ತಮ್ಮನ ಮೇಲೆ ಗುಂಡು ಹಾರಿಸಿದ್ದಾನೆ.
ಗುಂಡೇಟಿಗೆ ವಿನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಮ್ಮನನ್ನು ಕೊಂದ ಬಳಿಕ ಅಣ್ಣಮಣಿ ಪರಾರಿಯಾಗಲು ಯತ್ನಿಸಿದ್ದಾನೆ ಈ ವೇಳೆ ಪೊಲೀಸರು ಪ್ರಾಣಿ ಆಗೋದಕ್ಕೆ ಮನಿಗೆ ಅವಕಾಶ ನೀಡದೆ ತಕ್ಷಣ ಅರೆಸ್ಟ್ ಮಾಡಿದ್ದಾರೆ ಕೊಲೆ ಕುರಿತಂತೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.