ಹಾವೇರಿ : ಪತ್ನಿಯ ಶೀಲವನ್ನು ಶಂಕಿಸಿ ಅಣ್ಣನೊಬ್ಬ ಒಡಹುಟ್ಟಿದ ತಮ್ಮನನ್ನೇ ಭೀಕರವಾಗಿ ಇರಿದು ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ನೇನೋಗಲ್ಲ ತಾಂಡಾದಲ್ಲಿ ನಡೆದಿದೆ.
ಅನೈತಿಕ ಸಂಬಂಧದ ಶಂಕೆ ಹಿನ್ನಲೆಯಲ್ಲಿ ತಮ್ಮನ ಎದೆಗೆ ಅಣ್ಣ ಚೂರಿ ಹಾಕಿ ಕೊಲೆಗೈದ ಘಟನೆ ಹಾವೇರಿ ತಾಲೂಕಿನ ನೆಲೋಗಲ್ಲ ತಾಂಡಾದಲ್ಲಿ ನಡೆದಿದೆ. ಹನುಮಂತಪ್ಪ ಲಮಾಣಿ(42) ಕೊಲೆಯಾದ ದುರ್ದೈವಿಯಾಗಿದ್ದಾನೆ. ಶಂಕ್ರಪ್ಪ ಲಮಾಣಿ(55) ಎಂಬಾತನೇ ತಮ್ಮನನ್ನ ಕೊಲೆಗೈದ ಆರೋಪಿಯಾಗಿದ್ದಾನೆ.
ಆರೋಪಿ ಅಣ್ಣ ಶಂಕ್ರಪ್ಪ ನಿನ್ನೆ ರಾತ್ರಿ ಕುಡಿದು ಬಂದು ಇದೆ ವಿಷಯವಾಗಿ ಮನೆಯಲ್ಲಿ ಜಗಳ ಮಾಡಿದ್ದ, ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ತಮ್ಮ ಹನುಮಂತಪ್ಪನ ಎದೆಗೆ ಚೂರಿ ಇರಿದಿದ್ದನು. ತಕ್ಷಣ ಹನುಮಂತಪ್ಪ ಲಮಾಣಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಹಾವೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಹನುಮಂತಪ್ಪ ಲಮಾಣಿ ಸಾವನ್ನಪ್ಪಿದ್ದಾನೆ.
ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಶಂಕೆಯಿಂದ ತಮ್ಮ ಹನುಮಂತಪ್ಪ ಲಮಾಣಿಯನ್ನ ಕೊಲೆಗೈದಿರಬಹುದು ಎಂದು ಶಂಕಿಸಲಾಗಿದೆ.ಆರೋಪಿ ಶಂಕ್ರಪ್ಪನನ್ನು ಪೋಲಿಸರು ಬಂಧಿಸಿದ್ದಾರೆ. ಈ ಸಂಬಂಧ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Red See Attack: ಭಾರತಕ್ಕೆ ಹೊರಟಿದ್ದ ತೈಲ ಟ್ಯಾಂಕರ್ ಮೇಲೆ ‘ಕ್ಷಿಪಣಿ’ ದಾಳಿ
ಹೈಕಮಾಂಡ್ ನನ್ನ ಗುರುತಿಸಿ ಟಿಕೆಟ್ ಕೊಟ್ಟರೆ ಜನರ ಬಳಿ ಹೋಗುತ್ತೇನೆ : ಮಾಜಿ ಸಚಿವ ವಿ ಸೋಮಣ್ಣ ಹೇಳಿಕೆ