ನವದೆಹಲಿ : ದೆಹಲಿ ಜಲ ಮಂಡಳಿ (DJB) ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದಿಂದ ಉತ್ಪತ್ತಿಯಾದ ಲಂಚವನ್ನ ರಾಷ್ಟ್ರ ರಾಜಧಾನಿಯನ್ನ ಆಳುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಚುನಾವಣಾ ನಿಧಿಯಾಗಿ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ಆರೋಪಿಸಿದೆ.
ಈ ಪ್ರಕರಣದಲ್ಲಿ ಮಂಗಳವಾರ ನಡೆಸಿದ ದಾಳಿಯಲ್ಲಿ 1.97 ಕೋಟಿ ರೂ.ಗಳ ಬೆಲೆಬಾಳುವ ವಸ್ತುಗಳು ಮತ್ತು 4 ಲಕ್ಷ ರೂ.ಗಳ ವಿದೇಶಿ ಕರೆನ್ಸಿಯ ಹೊರತಾಗಿ ದೋಷಾರೋಪಣೆ ದಾಖಲೆಗಳು ಮತ್ತು ಡಿಜಿಟಲ್ ಪುರಾವೆಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್, ಎಎಪಿ ರಾಜ್ಯಸಭಾ ಸಂಸದ ಎನ್ ಡಿ ಗುಪ್ತಾ ಮತ್ತು ಇತರರ ನಿವಾಸಗಳ ಮೇಲೆ ಐಟಿ ದಾಳಿ ನಡೆಸಿತ್ತು.
ಬಂಧಿತ ಡಿಜೆಬಿಯ ಮಾಜಿ ಮುಖ್ಯ ಎಂಜಿನಿಯರ್ ಜಗದೀಶ್ ಕುಮಾರ್ ಅರೋರಾ ಅವರು ಎನ್ಕೆಜಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಕಂಪನಿಗೆ ಡಿಜೆಬಿ ಗುತ್ತಿಗೆ ನೀಡಿದ ನಂತರ ನಗದು ಮತ್ತು ಬ್ಯಾಂಕ್ ಖಾತೆಗಳಲ್ಲಿ ಲಂಚ ಸ್ವೀಕರಿಸಿದ್ದಾರೆ ಮತ್ತು ಈ ಹಣವನ್ನು ಎಎಪಿಗೆ ಸಂಬಂಧಿಸಿದ ವ್ಯಕ್ತಿಗಳು ಸೇರಿದಂತೆ ಡಿಜೆಬಿಯಲ್ಲಿ ವ್ಯವಹಾರಗಳನ್ನು ನಿರ್ವಹಿಸುವ ವಿವಿಧ ವ್ಯಕ್ತಿಗಳಿಗೆ ರವಾನಿಸಿದ್ದಾರೆ ಎಂದು ಸಂಸ್ಥೆ ಹೇಳಿದೆ.
BREAKING : ಶರದ್ ಪವಾರ್ ಪಕ್ಷಕ್ಕೆ ಹೊಸ ಹೆಸರು ಘೋಷಿಸಿದ ಚುನಾವಣಾ ಆಯೋಗ
BIG NEWS: ಕರ್ನಾಟಕದ ‘GST’ಯ ಒಂದು ಪೈಸೆಯೂ ‘ಬಾಕಿ’ ಉಳಿಸಿಕೊಂಡಿಲ್ಲ – ನಿರ್ಮಲಾ ಸೀತಾರಾಮನ್ ಸ್ಪಷ್ಟನೆ