ಕಲಬುರ್ಗಿ : ಕಲ್ಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ 1ದಿನದ ನವಜಾತ ಶಿಶು ಒಂದು ನಾವು ನರ್ಸ್ ಎಂದು ಹೇಳಿ ಖತರ್ನಾಕ್ ಕಳ್ಳಿಯರು ಮಗುವನ್ನು ಕಿಡ್ನ್ಯಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಲ್ಬುರ್ಗಿ ನಗರದ ಪೊಲೀಸರು ಕೇವಲ 48 ಗಂಟೆಗಳಲ್ಲಿ ನವಜಾತ ಶಿಶುವನ್ನು ಪತ್ತೆ ಹಚ್ಚಿ ತಾಯಿಯ ಮಡಿಲಿಗೆ ಸೇರಿಸಿದ್ದಾರೆ.
ಹೌದು ಕಿಡ್ನಾಪಾದ 48 ಗಂಟೆಗಳಲ್ಲಿ ಶಿಶುವನ್ನು ಪತ್ತೆಹಚ್ಚಿದ ಪೊಲೀಸರು ನವಜಾತ ಶಿಶುವನ್ನು ರಕ್ಷಿಸಿ ತಾಯಿಗೆ ಹಸ್ತಾಂತರಿಸಿದ್ದಾರೆ. ಕಲ್ಬುರ್ಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪರಿಂದ ಇದೀಗ ನವಜಾತ ಶಿಶುವನ್ನು ತಾಯಿಗೆ ಹಸ್ತಾಂತರಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಚಿತ್ತಾಪುರ ಮೂಲದ ಕಸ್ತೂರಿ ಎನ್ನುವ ಮಹಿಳೆ ಜಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.
ಈ ವೇಳೆ ನರ್ಸ್ ಅಂತ ಹೇಳಿ ಮಗುವಿಗೆ ಬ್ಲಡ್ ಚೆಕ್ ಅಪ್ ಮಾಡಬೇಕು ಎಂದು ಸಂಬಂಧಿಕರಿಂದ ಮಗುವನ್ನು ಪಡೆದು, ಬುರ್ಖಾ ಧರಿಸಿ ಮಗುವನ್ನು ಇಬ್ಬರು ಕಳ್ಳಿಯರು ಕಿಡ್ನ್ಯಾಪ್ ಮಾಡಿದ್ದರು. ಬಳಿಕ ಮಗುವನ್ನು ಖೈರಾನ್ ಎನ್ನುವವರಿಗೆ ಮಗುನು ಮಾರಾಟ ಮಾಡಿದ್ದರು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು 48 ಗಂಟೆಗಳಲ್ಲಿ ಮಗುವನ್ನು ಪತ್ತೆ ಹಚ್ಚಿ ತಾಯಿಯ ಮಡಿಲಿಗೆ ಸೇರಿಸಿದ್ದಾರೆ ಇಬ್ಬರು ಕಳ್ಳಿಯರನ್ನು ಕೂಡ ಬಂಧಿಸಲಾಗಿದೆ ಎಂದು ಕಲಬುರ್ಗಿ ಕಮಿಷನರ್ ಡಾ.ಶರಣಪ್ಪ ಮಾಹಿತಿ ನೀಡಿದ್ದಾರೆ.
ಶಿಶುವನ್ನು ಅಪಹರಿಸಿದ್ದ 3 ಕಳ್ಳಿಯರನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಉಮೇರಾ, ಹಸ್ರಿನ್ ಹಾಗೂ ಫಾತಿಮಾ ಎನ್ನುವರು ಬಂಧಿತ ಮಹಿಳೆಯರು. ಕಲ್ಬುರ್ಗಿಯ ಎಂ ಎಸ್ ಕೆ ಮಿಲ್ ಬಡಾವಣೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಪುರ ಠಾಣೆಯ ಪೊಲೀಸರಿಂದ ಮೂವರು ಕಳ್ಳಿಯರ ಬಂಧನವಾಗಿದೆ.