Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಜನತೆಯ ಗಮನಕ್ಕೆ : `ವಂಶವೃಕ್ಷ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

10/03/2026 11:11 AM

ಯುಪಿಎಸ್ಸಿ ಪರೀಕ್ಷೆಯಲ್ಲಿ ಮಂಡ್ಯದ ಹಳ್ಳಿ ಹೈದನ ಸಾಧನೆ ಕೃಷಿ ಬದುಕಿನ ಜೊತೆಗೆ UPSC ಪರೀಕ್ಷೆಯಲ್ಲಿ ಉತ್ತೀರ್ಣ

10/03/2026 11:10 AM

ಕೆಂಪೇಗೌಡ ಏರ್ಪೋರ್ಟ್ ಗು ತಪ್ಪದ ‘ವಾಮಾಚಾರ’? : ನಗ್ನ ಫೋಟೋ ಜೊತೆ ಹಲವು ವಸ್ತುಗಳ ಜೊತೆ ಬಂತು ಪಾರ್ಸೆಲ್!

10/03/2026 10:54 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಳ್ಳಾರಿ ಬಾಣಂತಿಯರ ಸಾವು : ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ : ಸಚಿವ ದಿನೇಶ್ ಗುಂಡೂರಾವ್
KARNATAKA

BREAKING : ಬಳ್ಳಾರಿ ಬಾಣಂತಿಯರ ಸಾವು : ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ : ಸಚಿವ ದಿನೇಶ್ ಗುಂಡೂರಾವ್

By kannadanewsnow0519/12/2024 5:21 PM

ಬೆಳಗಾವಿ : ಬಳ್ಳಾರಿಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರಲ್ಲಿ ತಪ್ಪಿತಸ್ಥರಾದವರನ್ನು ಸುಮ್ಮನೆ ಬಿಡುವುದಿಲ್ಲ. ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ, ಬಾಣಂತಿಯರ ಸಾವಿನ ಕುರಿತು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ಒಂದು ವೇಳೆ ನಾನು ತಪ್ಪಿತಸ್ಥನೆಂದು ತಿಳಿದು ಬಂದರೆ, ಯಾವುದೇ ಮುಲಾಜು ಇಲ್ಲದೇ, ನನ್ನ ಮೇಲಿನ ಕ್ರಮಕ್ಕೂ ಸಿದ್ಧ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ, ವಿರೋಧ ಪಕ್ಷದ ನಾಯಕರು ನಿಯಮ 69 ಅಡಿ ಬಾಣಂತಿಯರ ಸಾವಿನ ಕುರಿತು ಪ್ರಸ್ತಾಪಿಸಿದ್ದ ವಿಚಾರಗಳಿಗೆ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಉತ್ತರಿಸಿದರು.ಕಳೆದ ನವೆಂಬರ್ ತಿಂಗಳ 9, 10 ಹಾಗೂ 11 ತಾರೀಖಿನಂದು ಬಳ್ಳಾರಿ ಆಸ್ಪತ್ರೆಯಲ್ಲಿ 34 ಸಿಜೇರಿಯನ್ ಹೆರಿಗೆ ಮಾಡಲಾಗಿದೆ. ಈ ಪೈಕಿ 7 ಬಾಣಂತಿಯರು ಹೆರಿಗೆ ನಂತರ ತೀವ್ರ ತರನಾಗಿ ಅಸ್ವಸ್ಥಗೊಂಡರು. ಇದರಲ್ಲಿ 5 ಬಾಣಂತಿಯರು ಸಾವನಪ್ಪಿದರೆ, ಇಬ್ಬರು ಸಾವಿನಿಂದ ಪಾರಾದರು.

ಘಟನೆ ತಿಳಿದ ತಕ್ಷಣವೇ, ಸಾವಿನ ಕಾರಣ ತಿಳಿಯಲು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯರ ತಂಡ ರಚಿಸಿ ಬಳ್ಳಾರಿಗೆ ಕಳುಹಿಸಿಕೊಡಲಾಯಿತು. ಈ ತಂಡ ನವೆಂಬರ್ 12 ಹಾಗೂ 13 ರಂದು ಕೂಲಂಕಷವಾಗಿ ಅಧ್ಯಯನ ನಡೆಸಿ, ನವೆಂಬರ್ 14 ರಂದು ವರದಿ ನೀಡಿದೆ. ಇದರಲ್ಲಿ ವೈದ್ಯರು ಶಸ್ತçಚಿಕಿತ್ಸೆಯ ಎಲ್ಲ ಶಿಷ್ಟಾಚಾರ ನಿಯಮಗಳನ್ನು ಪಾಲಿಸಿದ್ದಾರೆ. ವೈದ್ಯರಿಂದ ಲೋಪವಾಗಿಲ್ಲ, ಬದಲಾಗಿ ಸಿಜೇರಿಯನ್ ನಂತರ ಬಾಣಂತಿಯರಿಗೆ ನೀಡಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ ಪ್ರತಿಕೂಲ ಪರಿಣಾಮದಿಂದ ಸಾವು ಸಂಭವಿಸಿರುವುದಾಗಿ ವರದಿ ನೀಡಿದರು.

ಇದರ ಆಧಾರದಲ್ಲಿ ಪಶ್ಚಿಮ್ ಬಂಗಾ ಕಂಪನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣವನ್ನು ಪರೀಕ್ಷೆಗಾಗಿ ಲ್ಯಾಬಿಗೆ ಕಳುಹಿಸಿಕೊಟ್ಟಾಗ ಕಳಪೆ ಗುಣಮಟ್ಟದ್ದು ಎಂದು ಪತ್ತೆಯಾಗಿದೆ. ಹೈದರಾಬಾದ್ ಲ್ಯಾಬ್‌ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ರಿಂಗರ್ ಲ್ಯಾಕ್ಟೇಟ್ ಐವಿಯಲ್ಲಿ ಎಂಡೋ ಟಾಕ್ಸಿಕ್ ಅಂಶ ಇರುವುದಾಗಿ ತಿಳಿದು ಬಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.

ಬಾಣಂತಿಯರ ಸಾವಿನ ಲೆಕ್ಕ ಪರಿಶೋಧನೆ

ಪಶ್ಚಿಮ್ ಬಂಗಾ ಕಂಪನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣವನ್ನು ರಾಜ್ಯದ ಇತರೆ ಆಸ್ಪತ್ರೆಗಳಿಗೂ ಪೂರೈಸಲಾಗಿದೆ, ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಂಭವಿಸಿದ ಬಾಣಂತಿಯರ ಸಾವಿನ ಲೆಕ್ಕ ಪರಿಶೋಧನೆಗೂ ಸೂಚನೆ ನೀಡಿದ್ದೇನೆ. ಮುಖ್ಯಮಂತ್ರಿಗಳು ಈಗಾಗಲೇ ಅಭಿವೃದ್ಧಿ ಆಯುಕ್ತರನ್ನು ಪ್ರಕರಣದ ಪರಿಶೀಲನೆ ನಡೆಸಿ ವರದಿ ನೀಡಲು ನೇಮಿಸಿದ್ದಾರೆ. ತಜ್ಞ ವೈದ್ಯರಿಂದಲೂ ತನಿಖೆ ನಡೆಯುತ್ತಿದೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಆಡಳಿತದಲ್ಲಿ ಸುಧಾರಣೆಗೆ ವರದಿ ನೀಡಲು ಹಿರಿಯ ಐ.ಎ.ಎಸ್ ಅಧಿಕಾರಿಯನ್ನು ಸಹ ನೇಮಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕಳಪೆ ಐವಿ ದ್ರಾವಣ ಪೂರೈಕೆ ಹೇಗೆ?

ಪಶ್ಚಿಮ್ ಬಂಗಾ ಕಂಪನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಕಳಪೆ ಗುಣಮಟ್ಟದ್ದು ಎಂದು ಪತ್ತೆಯಾದ ಮೇಲೂ ಐವಿ ದ್ರಾವಣ ಪೂರೈಕೆ ಹೇಗೆ ಆಯಿತು ಎನ್ನವುದರ ಕುರಿತು ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ವಿಸ್ತೃತ ಮಾಹಿತಿ ನೀಡಿದರು.ಕಳೆದ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿಯೇ ಐವಿ ದ್ರಾವಣದ ಗುಣಮಟ್ಟದ ಕುರಿತು ಸರ್ಕಾರಕ್ಕೆ ಮಾಹಿತಿ ದೊರಕಿತ್ತು. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಐವಿ ದ್ರಾವಣ ನೀಡಿದವರಿಗೆ ಚಳಿ ಹಾಗೂ ನಡುಕ ಉಂಟಾಗುತಿತ್ತು. ಇದೇ ಮಾದರಿಯಲ್ಲಿ ಗುಂಡ್ಲಪೇಟೆ ಆಸ್ಪತ್ರೆಯಲ್ಲಿಯು ರೋಗಿಗಳಿಗೆ ತೊಂದರೆಯಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರ ಎನ್.ಎ.ಬಿ.ಎಲ್ ಹಾಗೂ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಿದಾಗ ಐವಿ ದ್ರಾವಣ ಕಳಪೆ ಗುಣಮಟ್ಟದ್ದು ಎಂದು ವರದಿ ಬಂದಿದೆ. ಇದನ್ನು ಆಧರಿಸಿ ಪಶ್ಚಿಮ್ ಬಂಗಾ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವರು ಪೂರೈಹಿಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ 192 ಬ್ಯಾಚುಗಳ ಸರಬರಾಜನ್ನು ತಡೆ ಹಿಡಿಯಲಾಯಿತು.ಇದನ್ನು ವಿರೋಧಿ ಪಶ್ಚಿಮ ಬಂಗಾಳ ಕಂಪನಿ ಕೇಂದ್ರ ಔಷಧ ಲ್ಯಾಬೋರೆಟರಿಯಿಂದ ಗುಣಮಟ್ಟದ ಪರೀಕ್ಷೆಯ ವರದಿ ಆಧರಿಸಿ ನ್ಯಾಯಾಲಯದಲ್ಲಿ ಸರ್ಕಾರ ದಾವೆ ಹೂಡಿದೆ.

ಇದರೊಂದಿಗೆ ಎನ್.ಎ.ಬಿ.ಲ್ ಲ್ಯಾಬ್‌ಗಳು ಸಹ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ ಗುಣಮಟ್ಟ ಸರಿಯಿದೆ ಎಂದು ವರದಿ ನೀಡಿದವು.
ಜೂನ್ ತಿಂಗಳ ವೇಳೆಗೆ ರಾಜ್ಯದಲ್ಲಿ ಡೆಂಗ್ಯೂ ಹಾಗೂ ಇತರೆ ಶಸ್ತçಚಿಕತ್ಸೆ ಮಾಡಿದವರಿಗೆ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ನೀಡಲು ಬೇಡಿಕೆ ಹೆಚ್ಚಾಯಿತು. ಈ ವೇಳೆ ಸರ್ಕಾರ ಪಶ್ಚಿಮ್ ಬಂಗಾ ಕಂಪನಿ ಐವಿ ದ್ರಾವಣದ 192 ಬ್ಯಾಚುಗಳ ಗುಣಮಟ್ಟವನ್ನು ಮತ್ತೊಮ್ಮೆ ಪರಿಶೀಲಿಸಿ, 22 ಬ್ಯಾಚ್‌ಗಳನ್ನು ಕಳಪೆ ಎಂದು ತಡೆಹಿಡಿದು ಉಳಿದ ಬ್ಯಾಚುಗಳ ಐವಿ ದ್ರಾವಣವನ್ನು ಆಸ್ಪತ್ರೆಗಳಿಗೆ ಸರಬರಾಜು ಮಾಡಿದೆ. ನಂತರ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಐವಿ ದ್ರಾವಣದ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ.

ಈ ಹಿನ್ನೆಯಲ್ಲಿ ನವೆಂಬರ್ 9 ರಂದು ಬಳ್ಳಾರಿ ಆಸ್ಪತ್ರೆಗೆ ಪಶ್ಚಿಮ್ ಬಂಗಾ ಕಂಪನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಪೂರೈಕೆಯಾಗಿದೆ. ನಂತರ ಸರಣಿ ಬಾಣಂತಿಯರ ಸಾವು ಸಂಭವಿಸಿದೆ. ಕೂಡಲೇ ಈ ಐವಿ ದ್ರಾವಣವನ್ನು 5 ಎನ್.ಎ.ಬಿ.ಎಲ್ ಲ್ಯಾಬ್‌ಗಳಲ್ಲಿ ಪರೀಕ್ಷಿಸಿದಾಗಲೂ ಗುಣಮಟ್ಟ ಸರಿಯಿದೆ ಎಂದೇ ವರದಿ ಬಂದಿದೆ. ಆದರೆ ಹೈದರಾಬಾದ್ ಲ್ಯಾಬ್ ವರದಿಯಲ್ಲಿ ಮಾತ್ರ ಐವಿ ದ್ರಾವಣದಲ್ಲಿ ಎಂಡೋ ಟಾಕ್ಸಿಕ್ ಅಂಶ ಇರುವುದಾಗಿ ಪತ್ತೆಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿಸ್ತೃತವಾಗಿ ಘಟನೆ ಹಿನ್ನಲೆಯನ್ನು ಸದನದಲ್ಲಿ ವಿವರಿಸಿದರು.

ಫಾರ್ಮಾ ಕಂಪನಿಗಳ ಲಾಭಿ

ಭಾರತದ ಫಾರ್ಮಾ ಕಂಪನಿಗಳು ಪ್ರಪಂಚದಲ್ಲಿಯೇ ಉತ್ತಮ ಹೆಸರು ಹೊಂದಿವೆ. ಭಾರತ ವಿಶ್ವದ ಫಾರ್ಮಾ ಹಬ್ ಎಂದೇ ಪ್ರಸಿದ್ದಿ ಪಡೆದಿದೆ. ಆದರೆ ಈ ಫಾರ್ಮಾ ಕಂಪನಿಗಳಿಗೆ ಕರಾಳ ಮುಖ ಇದೆ. ವಿದೇಶಗಳಿಗೆ ಸರಬರಾಜು ಮಾಡುವ ಔಷಧಗಳ ತಯಾರಿಕೆಗೆ ಈ ಫಾರ್ಮಾ ಕಂಪನಿಗಳು ಪ್ರತ್ಯೇಕವಾಗಿ ಘಟಗಳನ್ನು ಸ್ಥಾಪಿಸಿವೆ. ಈ ಘಟಕಗಳು ಉತ್ತಮ ಗುಣಮಟ್ಟ ಹಾಗೂ ಎಲ್ಲ ಅಂತರಾಷ್ಟಿಯ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾರತದಲ್ಲಿ ಪೂರೈಸುವ ಔಷದ ಘಟಕಗಳ ಸ್ಥಿತಿ ಶೋಚನೀಯವಾಗಿದೆ.
ಕೇಂದ್ರ ಹಾಗೂ ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳನ್ನು ಈ ಫಾರ್ಮಾ ಕಂಪನಿಗಳು ತಮ್ಮ ಪ್ರಭಾವ ಬೀರಿ, ತಮಗೆ ಬೇಕಾದ ಹಾಗೆ ವರದಿ ಪಡೆಯುತ್ತಿವೆ.

ಬಹುತೇಕ ಕಂಪನಿಗಳು ಪೂರ್ವ ಈಶಾನ್ಯ ರಾಜ್ಯಗಳಲ್ಲಿ ಸ್ಥಾಪಿತವಾಗಿದ್ದು, ಇತರೆ ರಾಜ್ಯಗಳಿಗೆ ಅವುಗಳ ಮೇಲೆ ನಿಯಂತ್ರಣವಿಲ್ಲ. ಪಶ್ಚಿಮ ಬಂಗಾ ಕಂಪನಿಯ ಔಷಧ ತಯಾರಿಕಾ ಘಟಕಕ್ಕೆ ಕೇಂದ್ರ, ರಾಜ್ಯ ಹಾಗೂ ಪಶ್ಚಿಮ ಬಂಗಾಳ ರಾಜ್ಯದ ತನಿಖಾ ತಂಡಗಳು ಭೇಟಿ ನೀಡಿದ್ದು, ಕಂಪನಿಯ ಔಷಧ ತಯಾರಿಕೆಗೆ ತಡೆ ಒಡ್ಡಿವೆ. ರಾಜ್ಯ ಸರ್ಕಾರವು ಪಶ್ಚಿಮ ಬಂಗಾ ಕಂಪನಿಯ ಮೇಲೆ ಪ್ರಕರಣ ದಾಖಲಿಸಿದ್ದು, ರಾಜ್ಯದಲ್ಲಿನ ಬಾಣಂತಿಯರ ಸಾವಿಗೆ ಅವರನ್ನು ಹೊಣೆ ಮಾಡಿ, ಬಾದಿತ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಕೊಡಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶುಲ್ಕ ಹೆಚ್ಚಳ ಮಾಡಿಲ್ಲ 

ರಾಜ್ಯದ ಜಿಲ್ಲಾ, ತಾಲ್ಲೂಕು, ಸಮುದಾಯ ಹಾಗೂ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಯಾವುದೇ ಶುಲ್ಕಗಳನ್ನು ಹೆಚ್ಳಳ ಮಾಡಿಲ್ಲ ಎಂದು ಸಚಿವ ದಿನೇಶ್ ಗುಂಡುರಾವ್ ಸದನದಲ್ಲಿ ಸ್ಪಷ್ಟ ಪಡಿಸಿದರು.ರಾಜ್ಯದಲ್ಲಿ ಕಳೆದ 12 ವರ್ಷಗಳಿಂದ ಬಳಕೆದಾರರ ಶುಲ್ಕಗಳನ್ನು ಹೆಚ್ಚಿಸಿಲ್ಲ. ಈ ಹಿನ್ನಲೆಯಲ್ಲಿ ಪ್ರಾಯೋಗಿಕವಾಗಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಾತ್ರ ಶುಲ್ಕ ಹೆಚ್ಚಳ ಮಾಡಲಾಗಿದೆ. ರಾಜ್ಯದ ಎಲ್ಲ 108 ಆಂಬ್ಯುಲೆನ್ಸ್ ವಾಹನಗಳಲ್ಲಿ ಜಿ.ಪಿ.ಎಸ್ ಅಳವಡಿಸಲಾಗಿದೆ.

ದೇಶದಲ್ಲಿ ಬ್ರೆನ್ ಹೆಲ್ತ್ ಕ್ಲೀನಿಕ್‌ಗಳನ್ನು ಪ್ರಾರಂಭಿಸಿದ ಪ್ರಥಮ ರಾಜ್ಯ ಕರ್ನಾಟಕ, ಈ ಬಗ್ಗೆ ಕೇಂದ್ರ ನೀತಿ ಆಯೋಗವೂ ಮೆಚ್ಚುಗೆ ವ್ಯಕ್ತಪಡಿಸಿದೆ. ಆರೋಗ್ಯ ಇಲಾಖೆ ಎಲ್ಲಾ ವರ್ಗದ ನೌಕರರ ಸೇವಾ ಜೇಷ್ಠತಾ ಪಟ್ಟಿ ಸಿದ್ದಪಡಿಸಲಾಗಿದೆ. ರಾಷ್ಟಿçÃಯ ಆರೋಗ್ಯ ಮಿಷನ್ ಶೇ.84 ರಷ್ಟು ಅನುದಾನ, ರಾಜ್ಯದ ಶೇ.97 ರಷ್ಟು ಅನುದಾನವನ್ನು ಬಳಕೆ ಮಾಡಲಾಗಿದೆ. ರಾಜ್ಯದಲ್ಲಿ ಔಷಧÀಗಳ ಕೊರತೆಯಿಲ್ಲ. 1126 ವಿವಿಧ ಬಗೆಯ ಔಷಧÀಗಳು ಆಸ್ಪತ್ರೆಗಳಲ್ಲಿ ದೊರಕುತ್ತಿವೆ. ರಾಜ್ಯದ 17 ಜಿಲ್ಲಾ ಆಸ್ಪತ್ರೆ, 164 ತಾಲ್ಲೂಕು ಆಸ್ಪತ್ರೆ, 64 ಸಮುದಾಯ ಆರೋಗ್ಯ ಕೇಂದ್ರಗಳು ಎನ್.ಕ್ಯೂ.ಎ.ಸ್ ಮಾನ್ಯತೆ ಪಡೆದಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಯ ಗಮನಕ್ಕೆ : `ವಂಶವೃಕ್ಷ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

10/03/2026 11:11 AM2 Mins Read

ಯುಪಿಎಸ್ಸಿ ಪರೀಕ್ಷೆಯಲ್ಲಿ ಮಂಡ್ಯದ ಹಳ್ಳಿ ಹೈದನ ಸಾಧನೆ ಕೃಷಿ ಬದುಕಿನ ಜೊತೆಗೆ UPSC ಪರೀಕ್ಷೆಯಲ್ಲಿ ಉತ್ತೀರ್ಣ

10/03/2026 11:10 AM1 Min Read

ಕೆಂಪೇಗೌಡ ಏರ್ಪೋರ್ಟ್ ಗು ತಪ್ಪದ ‘ವಾಮಾಚಾರ’? : ನಗ್ನ ಫೋಟೋ ಜೊತೆ ಹಲವು ವಸ್ತುಗಳ ಜೊತೆ ಬಂತು ಪಾರ್ಸೆಲ್!

10/03/2026 10:54 AM1 Min Read
Recent News

ರಾಜ್ಯದ ಜನತೆಯ ಗಮನಕ್ಕೆ : `ವಂಶವೃಕ್ಷ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

10/03/2026 11:11 AM

ಯುಪಿಎಸ್ಸಿ ಪರೀಕ್ಷೆಯಲ್ಲಿ ಮಂಡ್ಯದ ಹಳ್ಳಿ ಹೈದನ ಸಾಧನೆ ಕೃಷಿ ಬದುಕಿನ ಜೊತೆಗೆ UPSC ಪರೀಕ್ಷೆಯಲ್ಲಿ ಉತ್ತೀರ್ಣ

10/03/2026 11:10 AM

ಕೆಂಪೇಗೌಡ ಏರ್ಪೋರ್ಟ್ ಗು ತಪ್ಪದ ‘ವಾಮಾಚಾರ’? : ನಗ್ನ ಫೋಟೋ ಜೊತೆ ಹಲವು ವಸ್ತುಗಳ ಜೊತೆ ಬಂತು ಪಾರ್ಸೆಲ್!

10/03/2026 10:54 AM

ಚಾರ್ಜರ್ ಸದಾ ಪ್ಲಗ್‌ನಲ್ಲೇ ಇರುತ್ತದೆಯೇ? ಹುಷಾರ್! ವಿದ್ಯುತ್ ಬಿಲ್ ಏರಿಕೆ ಮಾತ್ರವಲ್ಲ, ಮನೆಗೇ ಕಾದಿದೆ ಭಾರಿ ಅಪಾಯ!

10/03/2026 10:54 AM
State News
KARNATAKA

ರಾಜ್ಯದ ಜನತೆಯ ಗಮನಕ್ಕೆ : `ವಂಶವೃಕ್ಷ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5710/03/2026 11:11 AM KARNATAKA 2 Mins Read

ಬೆಂಗಳೂರು: ಕುಟುಂಬದ ಆಸ್ತಿ ಹಂಚಿಕೆ, ಪಿಂಚಣಿ ಸೌಲಭ್ಯ ಅಥವಾ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಸಾಬೀತುಪಡಿಸಲು ‘ವಂಶವೃಕ್ಷ’ ಅಥವಾ ‘ವಂಶಾವಳಿ ಪ್ರಮಾಣಪತ್ರ’…

ಯುಪಿಎಸ್ಸಿ ಪರೀಕ್ಷೆಯಲ್ಲಿ ಮಂಡ್ಯದ ಹಳ್ಳಿ ಹೈದನ ಸಾಧನೆ ಕೃಷಿ ಬದುಕಿನ ಜೊತೆಗೆ UPSC ಪರೀಕ್ಷೆಯಲ್ಲಿ ಉತ್ತೀರ್ಣ

10/03/2026 11:10 AM

ಕೆಂಪೇಗೌಡ ಏರ್ಪೋರ್ಟ್ ಗು ತಪ್ಪದ ‘ವಾಮಾಚಾರ’? : ನಗ್ನ ಫೋಟೋ ಜೊತೆ ಹಲವು ವಸ್ತುಗಳ ಜೊತೆ ಬಂತು ಪಾರ್ಸೆಲ್!

10/03/2026 10:54 AM

BREAKING : ‘PSI’ ಹಗರಣದ ಕಿಂಗ್ ಪಿನ್ ಆರ್.ಡಿ ಪಾಟೀಲ್ ಗೆ ಬಿಗ್ ಶಾಕ್ : ಜಾಮೀನು ನಿರಾಕರಿಸಿದ ಹೈಕೋರ್ಟ್

10/03/2026 10:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.