ಕೋಲಾರ : ವರದಕ್ಷಿಣೆ ವಿಚಾರವಾಗಿ ಗಂಡ ಹಾಗೂ ಆತನ ಮನೆಯವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದರಿಂದ ಬೇಸತ್ತ ಗೃಹಿಣಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾದನಹಟ್ಟಿ ಗ್ರಾಮದ ಬಳಿ ನಡೆದಿದೆ.
ಅತಿಯಾದ ‘ಸ್ಮಾರ್ಟ್ಫೋನ್’ ಬಳಕೆ 10 ವರ್ಷದೊಳಗಿನ ಮಕ್ಕಳ ಕಣ್ಣಿಗೆ ಹಾನಿಕಾರಕ: ವೈದ್ಯರ ಎಚ್ಚರಿಕೆ
ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯನ್ನು ನಿಧಿಶ್ರೀ(27) ಎಂದು ತಿಳಿದುಬಂದಿದೆ. ಪತಿ ಶ್ರೀರಾಮ, ಮಾವ ನಾರಾಯಣಸ್ವಾಮಿ, ಬಾಮೈದ ಅರುಣ್ ಹಾಗೂ ನಾದಿನಿ ಯಶೋಧಾ ವಿರುದ್ಧ ದೂರು ದಾಖಲಾಗಿದೆ. ದೂರು ದಾಖಲಾಗ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.ಇದೀಗ ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ರೈತರು, ಗ್ರಾಮಗಳ ಅಭಿವೃದ್ಧಿಯಿಲ್ಲದೆ ದೇಶದ ಏಳಿಗೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ:ಸಚಿವ ರಾಜನಾಥ್ ಸಿಂಗ್
ಇತ್ತ ಮೃತಳ ಕುಟುಂಬಸ್ಥರು ಗಂಡನ ಮನೆಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನ ನಮಗೆ ಒಪ್ಪಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತಳ ಕುಟುಂಬಸ್ಥರು ಆರೋಪಿಗಳನ್ನು ನಮಗೆ ಒಪ್ಪಿಸುವಂತೆ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಆದರೆ ಮೃತ ಶರೀರ ತೆಗೆದುಕೊಂಡು ಹೋಗುವಂತೆ ಪೊಲೀಸರು ಕುಟುಂಬಸ್ಥರ ಮನವೊಲಿಸಲು ಹರಸಾಹಸ ನಡೆಸಿದ್ದಾರೆ.
ಇಂದು ಮಂಡ್ಯದಲ್ಲಿ ‘ಗ್ಯಾರಂಟಿ ಸಮಾವೇಶ’ ಆಯೋಜನೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ
ಆದರೆ ಆರೋಪಿಗಳನ್ನು ಬಂಧಿಸಿ ನಮಗೆ ಒಪ್ಪಿಸುವವರಿಗೆ ಇಲ್ಲಿಂದ ಕದಲುವುದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.