ಆಂಧ್ರಪ್ರದೇಶ : ಕೋರ್ಟ್ ಗೆ ತೆರಳುತ್ತಿದ್ದ ತಂದೆ-ಮಗನನ್ನು ಅಪಹರಿಸಿ ಆಂಧ್ರದಲ್ಲಿ ಬರ್ಬರ ಕೊಲೆ ಮಾಡಿರುವಂತ ಘಟನೆ ನಡೆದಿದೆ.ಬೆಂಗಳೂರಿನ ಕಾಡುಗೋಡಿ ಮೂಲದ ಉದ್ಯಮಿಗಳು ಕೋರ್ಟ್ ಗೆ ತೆರಳುತ್ತಿದ್ದಂತ ಸಂದರ್ಭದಲ್ಲಿ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಅವರನ್ನು ಆಂಧ್ರಪ್ರದೇಶಕ್ಕೆ ಅಪಹರಿಸಿ ಕರೆದೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಂತ ಉದ್ಯಮಿ ವೀರಸ್ವಾಮಿ, ಪ್ರಶಾಂತ್ ರೆಡ್ಡಿಯನ್ನು ಕೊಲೆ ಮಾಡಲಾಗಿದೆ. ಕಾರ್ಪೊರೇಷನ್ ಚುನಾವಣೆಗೆ ನಿಲ್ಲೋದಕ್ಕೆ ವೀರಸ್ವಾಮಿ, ಪ್ರಶಾಂತ್ ಸಿದ್ಧತೆ ನಡೆಸಿದ್ದರು. ಮಹದೇವಪುರ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಹತ್ಯೆ ಮಾಡಲಾಗಿದೆ. ಆಂಧ್ರದ ಬಾಪೆಟ್ಲ ಜಿಲ್ಲೆಯ ಚೆಕ್ ಬೌನ್ಸ್ ಕೇಸ್ ದಾಖಲಾಗಿತ್ತು.
ವೀರಸ್ವಾಮಿ ರೆಡ್ಡಿ ಹಾಗೂ ಪ್ರಶಾಂತ ರೆಡ್ಡಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕೇಸ್ ವಿಚಾರಣೆಗೆ ಆಂಧ್ರಪ್ರದೇಶ ರಾಜ್ಯಕ್ಕೆ ತೆರಳಿದ್ದರು. ಈ ವೇಳೆ ಇಬ್ಬರನ್ನೂ ಅಪಹರಣ ಮಾಡಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೀರಸ್ವಾಮಿ ರೆಡ್ಡಿ ಹಾಗೂ ಪ್ರಶಾಂತ ರೆಡ್ಡಿ ಇಬ್ಬರೂ ಬೆಂಗಳೂರಿನ ಕಾಡುಗುಡಿ ಮೂಲದ ಉದ್ಯಮಿಗಳು ಆಗಿದ್ದರು. ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಆಪ್ತ ಮೂಲಗಳಲ್ಲಿ ಇವರು ಗುರುತಿಸಿಕೊಂಡಿದ್ದರು. ಕಾಡುಗೋಡಿಯ ವೀರಸ್ವಾಮಿ ರೆಡ್ಡಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು. ಇನ್ನು ಪುತ್ರ ಪ್ರಶಾಂತ್ ರೆಡ್ಡಿ ಮಹದೇವಪುರ ಬಿಜೆಪಿಯ ಯುವ ಮೋರ್ಚದ ಅಧ್ಯಕ್ಷರಾಗಿದ್ದರು.