ಮೈಸೂರು : ಇತ್ತೀಚಿಗೆ ಮೈಸೂರಲ್ಲಿ ಹಾಡ ಹಗಲೇ ಕೇರಳದ ಉದ್ಯಮಿಯ ಹಣ ಹಾಗೂ ಆತನ ಕಾರನ್ನು ದರೋಡೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕೇರಳದ ತ್ರಿಶೂರಿನ ರಜಿನ್ ಮತ್ತು ಪ್ರಮೋದ್ ಎಂದು ತಿಳಿದುಬಂದಿದೆ. ರಜಿನ್ ಮೂಲಕವೇ ದರೋಡೆಕೋರರು ವಾಹನ ಬಾಡಿಗೆ ಪಡೆದಿದ್ದರು.
ರಜಿನನ್ನು ಸದ್ಯ ಮೈಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಇನ್ನೋರ್ವ ಆರೋಪಿ ಪ್ರಮೋದ್ ನನ್ನು ತ್ರಿಶೂರಿನಲ್ಲಿ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಜಿನ್ ಮತ್ತು ಪ್ರಮೋದ್ ಇಬ್ಬರು ಸ್ನೇಹಿತರು ಎಂದು ತಿಳಿದುಬಂದಿದೆ. ರಜಿನ್ ವ್ಯಕ್ತಿ ಒಬ್ಬನನ್ನು ಪ್ರಮೋದ್ ಬಳಿಗೆ ಕರೆತಂದಿದ್ದ. ಪ್ರಮೋದ್ ಬಳಿ ವ್ಯಕ್ತಿಗೆ ಕಾರು ಬಾಡಿಗೆ ಕೊಡಿಸಿದ್ದ. ದರೋಡೆಕೋರರಿಗೆ ಕಾರು ಬಾಡಿಗೆ ಕೊಡಿಸಿದ ಬಗ್ಗೆ ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ ಪ್ರಕರಣದ ಕುರಿತು ಮೈಸೂರು ಮತ್ತು ಕೇರಳ ಪೊಲೀಸ್ರು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಹೌದು ಕೇರಳದ ಉದ್ಯಮಿ ಅಶ್ರಫ್ ಅಹ್ಮದ್ ಹಾಗೂ ಕಾರು ಚಾಲಕ ಸೂಫಿಯನ್ನು ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ಹಾರೋಹಳ್ಳಿ ಬಳಿ ಮುಸುಕುಧಾರಿ ದರೋಡೆಕೋರರು ಅವರ ಕಾರನ್ನು ಅಡ್ಡಗಟ್ಟಿ, ಅವರ ಬಳಿದ್ದ ಹಣ ಹಾಗೂ ಕಾರಿನ ಸಮೇತ ಪರಾರಿಯಾಗಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಇನ್ನು ನಿನ್ನೆ ದರೋಡೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಉದ್ಯಮಿಯ ಕಾರು ಹಾಗೂ ದರೋಡೆ ಕೋರರ ಕಾರು ಪತ್ತೆಯಾಗಿದೆ. ಉದ್ಯಮಿ ಅಶ್ರಫ್ ಅಹ್ಮದ್ ಹಾಗೂ ಅವರ ಕಾರು ಚಾಲಕ ಸೂಫಿ ಎಂಬುವವರ ಕಾರನ್ನು ಹೆಚ್.ಡಿ.ಕೋಟೆ ಬಳಿಯ ಹಾರೋಹಳ್ಳಿ ಬಳಿ ಅಡ್ಡಗಟ್ಟಿದ್ದ ದರೋಡೆಕೋರರ ಗ್ಯಾಂಗ್, ಕಾರಿನಿಂದ ಅವರನ್ನು ಕೆಳಗಿಳಿಸಿ, ಹಲ್ಲೆ ನಡೆಸಿ ಹಣ ಹಾಗೂ ಕಾರಿನ ಸಮೇತ ಎಸ್ಕೇಪ್ ಆಗಿದ್ದರು.
ಸುಮಾರು 12 ಕೀ.ಮೀ ದೂರದಲ್ಲಿ ಉದ್ಯಮಿಯ ಕಾರನ್ನು ಬಿಟ್ಟು, ಅದರಲ್ಲಿದ್ದ 1.5 ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ. ಉದ್ಯಮಿ ಕಾರು ಮಾಂಬಳ್ಳಿ ಬಳಿ ಪತ್ತೆಯಾಗಿದೆ. ಇನ್ನೊಂದು ಕಾರು ಗೋಪಾಲ್ ಪುರ ಬಳಿ ಪತ್ತೆಯಾಗಿದೆ. ಎರಡೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.