ಚಿಕ್ಕಬಳ್ಳಾಪುರ : ಜಿಲ್ಲೆಯ ತಮ್ಮನಾಯಕನಹಳ್ಳಿ ಗೇಟ್ ಬಳಿ ನಿನ್ನೆ ಲಾಂಗ್ನಿಂದ ಕೊಚ್ಚಿ ಜೆಡಿಎಸ್ ಮುಖಂಡ ವೆಂಕಟೇಶ್ ನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಧನು ಅಲಿಯಾಸ್ ಧನರಾಜ್ ಹಾಗೂ ಆತನ ಸಹಚರ ಸತೀಶ್ ಎಂದು ಗುರುತಿಸಲಾಗಿದೆ. ಹಳೆಯ ದ್ವೇಷ ಹಿನ್ನಲೆ ಹತ್ಯೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದ್ದಾರೆ.ವೆಂಕಟೇಶ್ ತೆರಳುತ್ತಿದ್ದ ಸ್ಕೂಟಿಯನ್ನು ಅಡ್ಡಗಟ್ಟಿದ್ದ ಧನರಾಜ್ ಹಾಗೂ ಸತೀಶ್ ಮೊದಲು ಹಂದಿ ಕೊಯ್ಯುವ ಚಾಕುವಿನಿಂದ ಬೆನ್ನಿಗೆ ಇರಿದಿದ್ದರು. ನಂತರ ಹೊಟ್ಟೆ, ಮುಖಕ್ಕೆ ಮೂರು ಬಾರಿ ಹೊಡೆದಿದ್ದರು. ಅಲ್ಲದೇ ಕೈ ಕಟ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು.
ಇದೀಗ ಬಳಿಕ ಆರೋಪಿಗಳು ಬೆಂಗಳೂರಿನಲ್ಲಿ ರೂಮ್ ಮಾಡಿಕೊಂಡಿದ್ದರು. ಆರೋಪಿಗಳನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮೂರು ದಿನಗಳ ಹಿಂದೆ ತಮ್ಮನಾಯ್ಕನಹಳ್ಳಿ ಗೆಟ್ ಬಳಿ ಇರುವ ಬಾರ್ ಹತ್ತಿರ ಕೆಲವರು ಕುಡಿದು ಗಲಾಟೆ ಮಾಡುತ್ತಿದ್ದರಂತೆ. ಆಗ ವೆಂಕಟೇಶ್ ಅವರಿಗೆ ಬೈಯ್ದು ಬುದ್ದಿವಾದ ಹೇಳಿದ್ದರು. ಆಗ ಪುಂಡರು ವೆಂಕಟೇಶ್ರ ಜೊತೆ ಗಲಾಟೆ ತೆಗೆಯಲು ಮುಂದಾಗಿದ್ದರಂತೆ. ಇದನ್ನು ಬಿಟ್ಟರೆ ವೆಂಕಟೇಶ್ ಅವರಿಗೆ ಯಾರು ವೈರಿಗಳು ಇರಲಿಲ್ಲ.