ಮಂಗಳೂರು : ಮಂಗಳೂರು ಹೊರವಲಯದ ಪಣಂಬೂರು ಬೀಚ್ಗೆ ಕೇರಳದ ಯುವಕ ಹಾಘೂ ಬೆಂಗಳೂರಿನ ಯುವತಿ ಬಂದಿದ್ದರು. ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಯುವಕ-ಯುವತಿಯನ್ನು ತಡೆದು ವಿಚಾರಣೆ ನಡೆಸಿ ಕಿರಿಕ್ ಮಾಡಿದ್ದಾರೆ. ಪಣಂಬೂರು ಪೊಲೀಸರು ಮೂರು ಮಂದಿ ರಾಮ್ ಸೇನೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.
ಪಣಂಬೂರು ಬೀಚ್ ನಲ್ಲಿ ಅನ್ಯಕೋಮಿನ ಯುವಕ ಯುವತಿಯನ್ನ ತಡೆದು ಹಿಂದೂ ಸಂಘಟನೆ ಕಾರ್ಯಕರ್ತರು ಕಿರಿಕ್ ಮಾಡಿದ್ದಾರೆ. ಸದ್ಯ ಪಣಂಬೂರು ಪೊಲೀಸರು ಮೂರು ಮಂದಿ ರಾಮ್ ಸೇನೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಘಟನೆ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಹೊರವಲಯದ ಪಣಂಬೂರು ಬೀಚ್ಗೆ ಕೇರಳದ ಯುವಕ ಹಾಗೂ ಬೆಂಗಳೂರಿನ ಯುವತಿ ಬಂದಿದ್ದರು. ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಯುವಕ-ಯುವತಿಯನ್ನು ತಡೆದು ವಿಚಾರಣೆ ನಡೆಸಿ ಕಿರಿಕ್ ಮಾಡಿದ್ದಾರೆ. ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪಣಂಬೂರು ಪೊಲೀಸರು ಮೂರು ಮಂದಿ ರಾಮ್ ಸೇನೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.
ಇತ್ತೀಚಿಗೆ ಹಾವೇರಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆದು ಅಲ್ಪಸಂಖ್ಯಾತ ಮಹಿಳೆಯ ಮೇಲೆ ಮುಸ್ಲಿಂ ಯುವಕರು ಅತ್ಯಾಚಾರ ನಡೆಸಿದ ಘಟನೆ ಇಡೀ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು.ನಂತರ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ ಹಾವೇರಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿತ್ತು.