ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪಹಲ್ಗಾಮ್ ನಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ, ಇದೀಗ NIA ಹಿರಿಯ ಅಧಿಕಾರಿಯೊಬ್ಬರು ದಾಳಿ ನಡೆಸಿದ ಉಗ್ರರಿಗೆ ಹಮಾಸ್ ನಿಂದ ಬಂದಂತಹ ಮೂವರು ಕಮಾಂಡರ್ ಗಳು ತರಬೇತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ
ಹೌದು ಕಳೆದ ಆರು ತಿಂಗಳ ಹಿಂದೆ ಈ ಮೂವರು ಹಮಾಸ್ ಕಮಾಂಡರ್ ಗಳು ಪಾಕಿಸ್ತಾನಕ್ಕೆ ಬಂದಿದ್ದಾರೆ. ಸಿದ್ಧತೆ ಮತ್ತು ವಿಧಾನ ಹಮಾಸ್ ನಂತೆಯೇ ಇತ್ತು. ಹಮಾಸ್ ಕಮಾಂಡರ್ ಗಳಾದ ಡಾ. ಖಾಲಿದ್ ಖಾಧುನಿ, ಡಾ.ಅನಾಜಿ ಜಹೀರ್ ಹಾಗೂ ಮಫ್ತಿ ಅಜಂ ಪಾಕಿಸ್ತಾನದಲ್ಲಿ ಪಿತೂರಿ ನಡೆಸಿದ್ದರು. ಲಷ್ಕರ್ ಎ ತೊಯ್ಬಾ, ಸಂಘಟನೆಗಳೊಂದಿಗೆ ಹಮಾಸ್ ಕಮಾಂಡರ್ ಗಳು ನಿರಂತರ ಸಂಪರ್ಕ ಹೊಂದಿದ್ದರು. ಎನ್ನಲಾಗಿದೆ. ಭಾರತ ವಿರೋಧಿ ರ್ಯಾಲಿಯಲ್ಲಿ ಖಾಲಿದ್, ಜಹೀರ್ ಮತ್ತು ಅಜಂ ಭಾಗಿಯಾಗಿದ್ದರು.
ಫೆಬ್ರವರಿ 6ರಂದು ಪಿಓಕೆಯ ರಾವಲಕೋಟ್ ನಲ್ಲಿ ರಾಲಿ ನಡೆದಿದ್ದು, ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಸಹೋದರ, ಕಮಾಂಡರ್ ಹೊಸಗರ್ ಖಾನ್ ಮಸೂದ್ ಇಲ್ಯಾಸ್ ಸಹ ಭಾಗಿಯಾಗಿದ್ದರು. ರ್ಯಾಲಿ ನಂತರ ಸುಮಾರು 15 ದಿನಗಳ ಕಾಲ ಹಮಾಸ್ ಕಮಾಂಡರ್ ಗಳು ಅಲ್ಲಿಯೇ ಇದ್ದರು. ಈ ವೇಳೆ ಹಲವು ಬಾರಿ ಲಷ್ಕರ್ ಉಪ ಮುಖ್ಯಸ್ಥ ಸೈಫುಲ್ಲ ಭೇಟಿಯಾಗಿದ್ದಾನೆ ಈ ಸಮಯದಲ್ಲೇ ಪಹಲ್ಗಾಮ್ ದಾಳಿಯ ಬಗ್ಗೆ ಸಿದ್ಧಪಡಿಸಲಾಗಿತ್ತು ಎಂದು NIA ಹಿರಿಯ ಅಧಿಕಾರಿ ತಿಳಿಸಿದರು.