ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಕುಟುಂಬವೊಂದು ಕೊಚ್ಚಿ ಹೋದಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ ನಾಪತ್ತೆಯಾಗಿದ್ದ 5 ವರ್ಷದ ಬಾಲಕಿ ಅವಂತಿಕ ಮೃತ ದೇಹ ಪತ್ತೆಯಾಗಿದೆ.
ಹೌದು ಗುಡ್ಡ ಕುಸಿತ ದುರಂತದಲ್ಲಿ ಗಂಗೆಕೊಳ್ಳದ ಸಮುದ್ರ ತೀರದಲ್ಲಿ 5 ವರ್ಷದ ಬಾಲಕಿ ಅವಂತಿಕ ಶವ ಪತ್ತೆಯಾಗಿದೆ. ತಕ್ಷಣ ಅವಂತಿಕಾಳ ಮೃತದೇಹವನ್ನು ಗೋಕರ್ಣದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ನಿನ್ನೆ ಕುಟುಂಬದ ಇತರೆ ಸದಸ್ಯರ ಮೃತದೇಹ ಪತ್ತೆಯಾಗಿತ್ತು. ಲಕ್ಷ್ಮಣ ನಾಯಕ, ಶಾಂತಿ, ಪುತ್ರ ರೋಶನ್ ಮೃತ ದೇಹ ಪತ್ತೆಯಾಗಿತ್ತು. ಇದೀಗ ಗಂಗೆ ಕೊಳದ ಸಮುದ್ರ ತೀರದಲ್ಲಿ ಲಕ್ಷ್ಮಣ ಪುತ್ರಿ ಅವಂತಿಕಾಳ ಮೃತದೇಹ ಪತ್ತೆಯಾಗಿದೆ. ಸದ್ಯ ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನು ಕೆಲವರು ಮಣ್ಣಿನಡಿ ಸಿಲುಕಿರುವ ಶಂಕೆ ಇದ್ದಿದ್ದರಿಂದ ಕಾರ್ಯಚರಣೆ ಮುಂದುವರೆದಿದೆ.