ಕಲಬುರಗಿ : ತೊಗರಿ ಬೆಳೆಯಲು ಬ್ಯಾಂಕ್ ಹಾಗೂ ಖಾಸಗಿಯಾಗಿ ಲಕ್ಷಾಂತರ ರೂ.ಸಾಲ ಮಾಡಿದ್ದ ರೈತನೊಬ್ಬ, ಬೆಳೆ ಕೈಕೊಟ್ಟಿದ್ದರಿಂದ ಬ್ಯಾಂಕ್ ನವರು ನೋಟಿಸ್ ನೀಡಿದ್ದಕ್ಕೆ ಹೆದರಿಕೊಂಡು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೊತಂಗಲ ಗ್ರಾಮದಲ್ಲಿ ನಡೆದಿದೆ.
ಪಾಂಡಪ್ಪ ತಿಪ್ಪಣ್ಣ ಕೊರುವನ್ (45) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಹೇಳಲಾಗಿತ್ತಿದ್ದು, ತೊಗರಿ ಬೆಳೆಯಲು ಬ್ಯಾಂಕ್ ಹಾಗೂ ಖಾಸಗಿಯಾಗಿ ಲಕ್ಷಾಂತರ ರೂ.ಸಾಲ ಮಾಡಿದ್ದ. ಆದರೆ, ದುರಾದೃಷ್ಟವಶಾತ್ ನಿರಂತರವಾಗಿ ಸುರಿದ ಮಳೆಗೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ನಾಶವಾಗಿತ್ತು. ಇತ್ತ ಬ್ಯಾಂಕ್ ಅಧಿಕಾರಿಗಳ ಸಾಲದ ಕಿರುಕುಳಕ್ಕೆ ಹೆದರಿ ತಿಪ್ಪಣ್ಣ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಸುಲೇಪೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.