ಚಿತ್ರದುರ್ಗ : ಚಿತ್ರದುರ್ಗದಲ್ಲಿ ಇಬ್ಬರು ಬಾಲಕರನ್ನು ಕಿಡ್ನಾಪ್ ಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯ ವೇಳೆ ಸತ್ಯಾಂಶ ತಿಳಿದು ಇದೀಗ ಪೊಲೀಸರೇ ಶಾಕ್ ಆಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಬಳಿ ಬಾಲಕರ ಕಿಡ್ನ್ಯಾಪ್ ಯತ್ನ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ಮಕ್ಕಳ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ವಿಚಾರಣೆ ವೇಳೆ ಚಾಲಕರು ಕಥೆ ಕಟ್ಟಿದ್ದು ಬಯಲಾಗಿದೆ. ಹೋಂವರ್ಕ್ಹಾಗೂ ಟ್ಯೂಷನ್ ನಿಂದ ತಪ್ಪಿಸಿಕೊಳ್ಳಲು ಬಾಲಕರು ಕಿಡ್ನಾಪ್ ಕಥೆ ಕಟ್ಟಿದ್ದಾರೆ ಎಂದು ತಿಳಿದುಬಂದಿದೆ. ಓಮಿನಿಯಲ್ಲಿ ಬಂದ ಮುಸುಕು ದಾರಿಗಳು ಕಿಡ್ನ್ಯಾಪ್ಗೆ ಯತ್ನಿಸಿದ್ದರು.
ಅಪಹರಣಕಾರರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಈ ಬಾಲಕರಲ್ಲ ಎಂಬ ಕರೆ ಬಂದಾಗ ಬಿಟ್ಟು ಹೋದರು ಎಂದು ಬಾಲಕರು ತಿಳಿಸಿದ್ದಾರೆ. ಬಾಲಕರಿಬ್ಬರ ಅಪಹರಣ ಯತ್ನ ಆರೋಪ ಕೇಸ್ ಆತಂಕ ಸೃಷ್ಟಿ ಮಾಡಿತ್ತು. ಅಬ್ಬಿನಹೊಳೆ ಠಾಣೆ ಪೊಲೀಸರಿಂದ ತನಿಖೆಯ ವೇಳೆ ಈ ಒಂದು ಸತ್ಯಾಂಶ ಬಯಲಾಗಿದೆ.