ನವದೆಹಲಿ : ಇತ್ತೀಚಿಗೆ ದೇಶದಲ್ಲಿ ಡಿಜಿಟಲ್ ಬಂಧನ ಹಾಗೂ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಹಾಗಾಗಿ ಇದೀಗ ಕೇಂದ್ರ ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಂಡಿದ್ದು, 17 ಸಾವಿರಕ್ಕೂ ಹೆಚ್ಚು ವಾಟ್ಸಪ್ ಖಾತೆಗಳನ್ನು ಕೇಂದ್ರದ ಗೃಹ ಸಚಿವಾಲಯ ಇದೀಗ ನಿರ್ಬಂಧಿಸಿದೆ.
ಹೌದು ದೇಶದಲ್ಲಿ ಡಿಜಿಟಲ್ ಬಂಧನ ಹಾಗೂ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ 17,000 ಖಾತೆಗಳನ್ನು ನಿರ್ಬಂಧಿಸಿದೆ. ಮಯನ್ಮಾರ್, ಕಾಂಬೋಡಿಯ ಹಾಗೂ ಲಾವೊಸ್ ವ್ಯಾಪ್ತಿಯಲ್ಲಿ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಸೈಬರ್ ವಂಚಕರ ಸುಮಾರು 17 ಸಾವಿರ ವಾಟ್ಸಾಪ್ ಖಾತೆಗಳನ್ನು ಇದೀಗ ಕೇಂದ್ರದ ಗೃಹ ಸಚಿವಾಲಯ ನಿರ್ಬಂಧಿಸಿದೆ.