ಧಾರವಾಡ : ಧಾರವಾಡದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಕರಡಿಗುಡ್ಡ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಧಾರವಾಡ ತಾಲೂಕಿನ ಗರಗ ಠಾಣೆಯ ಪೊಲೀಸರು ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಗರಗ ಠಾಣೆಯ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಖಂಡೊಬಾ ಪಟದಾರಿ (26), ಆಕಾಶ್ ಮಾದಪ್ಪನವರ (19), ಪ್ರಜ್ವಲ್ ವಡ್ಡರ್ (19) ಹಾಗೂ ಮಂಜುನಾಥ್ ಚಿಕ್ಕೋಪ್ಪ (20) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.ಡಿಸೆಂಬರ್ 3 ರಂದು ಧಾರವಾಡ ತಾಲೂಕಿನ ಗ್ರಾಮದಲ್ಲಿ ಉದ್ಯಮಿಯ ಕೊಲೆ ನಡೆದಿತ್ತು.
ರಿಯಲ್ ಎಸ್ಟೇಟ್ ಉದ್ದಮಿ, ಗಿರೀಶ್ ಕರಡಿಗುಡ್ಡ ಅವರನ್ನು ಈ ನಾಲ್ವರು ಆರೋಪಿಗಳು ಮನೆಗೆ ನುಗ್ಗಿ ಭೀಕರವಾಗಿ ಹಲ್ಲೆ ಮಾಡಿದ್ದರು. A1 ಆರೋಪಿ ಖಂಡೊಬಾ ಗಿರೀಶ್ ಕರಡಿಗುಡ್ಡ ಅವರ ಪತ್ನಿಯ ಬೆನ್ನು ಬಿದ್ದಿದ್ದ, ಇದನ್ನು ತಿಳಿದು ಆರೋಪಿ ಖಂಡೋಭಾಗೆ ಗಿರೀಶ್ ಕರಡಿಗುಡ್ಡ ಥಳಿಸಿ ಬುದ್ಧಿ ಹೇಳಿದ್ದ. A2 ಆಕಾಶ್ A3 ಪ್ರಜ್ವಲ್ ನಿಂದ ಗಿರೀಶ್ ಹಿರಿಯ ಪುತ್ರಿಗೆ ಕಾಟ ನೀಡಲಾರಂಬಿಸಿದ್ದರು. ಆಕಾಶ್ ಮತ್ತು ಪ್ರಜ್ವಲ್ ಗಿರೀಶ್ ಹಿರಿಯ ಪ್ರಕ್ರಿಯ ಬೆನ್ನು ಬಿದ್ದಿದ್ದರು. ಅವರಿಗೂ ಕೂಡ ಗಿರೀಶ್ ವಾರ್ನ್ ಮಾಡಿದ್ದ.
ಗಿರೀಶನನ್ನೇ ಮುಗಿಸಲು ಈ ನಾಲ್ವರು ಆರೋಪಿಗಳು ಪ್ಲಾನ್ ಮಾಡಿದ್ದರು. ಹಾಗಾಗಿ ಮನೆಯಲ್ಲಿ ಒಬ್ಬನೇ ಇದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಗಿರೀಶ್ ಅವರನ್ನು ಕೊಲೆ ಮಾಡಿದ್ದಾರೆ ಕೊಲೆ ಮಾಡಲು ಸಾತ್ ನೀಡಿದ್ದ A4 ಮಂಜುನಾಥ್ ಚಿಕ್ಕೋಪ್ಪ. ಸದ್ಯ ಧಾರವಾಡದ ಗರಗ ಠಾಣೆಯ ಪೊಲೀಸರಿಂದ ಇದೀಗ ಈ ಎಲ್ಲಾ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.