ಬೆಂಗಳೂರು : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣದಲ್ಲಿ ನಟಿ ರನ್ಯಾರಾವ್ ಈಗಾಗಲೇ ಜೈಲು ಪಾಲಾಗಿದ್ದಾರೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರನ್ಯಾ ಅವರ ಬಾಯ್ ಫ್ರೆಂಡ್ ಆಗಿರುವ ತರುಣ್ ರಾಜು ಮೇಲು ಇದೀಗ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹೌದು ಇಂದು ಇಡಿ ಅಧಿಕಾರಿಗಳು ಬೆಂಗಳೂರಿನ ಲ್ಯಾವೆಲ್ಲಿ ಮೆನ್ಷನ್ ಅಪಾರ್ಟ್ಮೆಂಟಲ್ಲಿ ಇಡೀಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇದೀಗ ಆಕೆ ಬಾಯ್ ಫ್ರೆಂಡ್ ಆಗಿದ್ದ ತರುಣ ರಾಜು ನಿವಾಸದ ಮೇಲು ಇಡಿ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ತರುಣ್ ರಾಜು ಯಾರು?
ನಟಿ ರನ್ಯಾ ರಾವ್ ಅವರು ಟಾಲಿವುಡ್ ನಟ ತರುಣ್ ಎಂಬುವರು ಬಾಯ್ ಫ್ರೆಂಡ್ ಎಂಬುದಾಗಿ ಹೇಳಲಾಗುತ್ತಿದೆ. ತೆಲುಗು ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲು ಸಿನಿಮಾಗಾಗಿ ತನ್ನ ಹೆಸರನ್ನು ತರುಣ್ ಎಂಬುದಾಗಿ ಬದಲಿಸಿಕೊಂಡಿದ್ದನಂತೆ. ತರುಣ್ ಮೂಲ ಹೆಸರು ವಿರಾಟ್ ಕೊಂಡೂರು ರಾಜ್ ಎಂಬುದಾಗಿದೆ.
2018ರಲ್ಲಿ ತೆರೆ ಕಂಡಂತ ಪರಿಚಯಂ ಸಿನಿಮಾದಲ್ಲಿ ತರುಣ್ ಜೊತೆಗೆ ನಟಿ ರನ್ಯಾ ರಾವ್ ನಟಿಸಿದ್ದರು. ಪರಿಚಯಂ ಸಿನಿಮಾದ ನಾಯಕ ನಟರಾಗಿದ್ದದ್ದೇ ತರುಣಾ ರಾಜ್ ಆಗಿದ್ದಾರೆ. ತೆಲುಗಿನ ಮೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ತರುಣ್ ಹೀರೋ ಆಗಿ ನಟಿಸಿದ್ದಾರೆ. ತರುಣ್ ಅವರೇ ನಟಿ ರನ್ಯಾ ರಾವ್ ಅವರ ಬಾಯ್ ಫ್ರೆಂಡ್ ಎನ್ನಲಾಗುತ್ತಿದೆ.