ವಿಜಯಪುರ : ಕಳೆದ ಕೆಲವು ದಿನಗಳ ಹಿಂದೆ ಮುರುಡೇಶ್ವರ ಬೀಚ್ ನಲ್ಲಿ ಸಮುದ್ರದಲ್ಲಿ ಮುಳುಗಿ ಕೋಲಾರ ಜಿಲ್ಲೆಯ ವಸತಿ ನಿಲಯದ ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದರು. ಇದೀಗ ಶಾಲಾ ಶೈಕ್ಷಣಿಕ ಪ್ರವಾಸದ ಬಳಿಕ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಹೌದು ವಿದ್ಯಾರ್ಥಿನಿಯ ಪ್ರಾಣಕ್ಕೆ ಇದೀಗ ಶಾಲಾ ಶೈಕ್ಷಣಿಕ ಪ್ರವಾಸ ಕಂಟಕವಾಗಿದೆ ಎನ್ನಲಾಗಿದೆ. ಪ್ರವಾಸದ ಬಳಿಕ ಅನಾರೋಗ್ಯದಿಂದ ಶಂಕ್ರಮ್ಮ ಮಲ್ಲನಗೌಡ (15) ಎನ್ನುವ ಬಾಲಕಿ ಸಾವನ್ನಪ್ಪಿದ್ದಾಳೆ. ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳಿದ್ದಾಳೆ.ಪ್ರವಾಸದ ಬಳಿಕ ಅನಾರೋಗ್ಯದಿಂದ 30ಕ್ಕೂ ಹೆಚ್ಚು ಮಕ್ಕಳು ಬಳಲುತ್ತಿದ್ದರು. ಈ ಪೈಕಿ 9ನೇ ತರಗತಿಯ ವಿದ್ಯಾರ್ಥಿನಿ ಶಂಕ್ರಮ್ಮ ಮಲ್ಲನಗೌಡ ಬಿರಾದರ್ ಸಾವನ್ನಪ್ಪಿದ್ದಾಳೆ.
ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮದ ಸರ್ಕಾರಿ ಶಾಲೆಯ ಸುಮಾರು 110 ಮಕ್ಕಳನ್ನು ಕಳೆದ ಡಿಸೆಂಬರ್ 9 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ಎಂದು ಕರೆದುಕೊಂಡು ಹೋಗಲಾಗಿತ್ತು. ಪ್ರವಾಸದ ಬಳಿಕ ಚಳಿ ಜ್ವರ ನೆಗಡಿ ಕೆಮ್ಮು ಕಫದಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಳಲಿದ್ದಾರೆ. ಪ್ರವಾಸದ ವೇಳೆ ಊಟ ಹಾಗೂ ವಸತಿ ಸರಿಯಾಗಿ ನೀಡಿದ ಆರೋಪ ಇದೀಗ ಕೇಳಿಬಂದಿದೆ. ಪ್ರವಾಸಕ್ಕೆ ಕರೆದುಕೊಂಡು ಹೋಗಿದ ಶಿಕ್ಷಕರಿಂದ ನಿರ್ಲಕ್ಷ ಆರೋಪ ಕೇಳಿ ಬಂದಿದೆ.
ಶಿಕ್ಷಕರು ಓರ್ವ ಸಹಾಯಕ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿದ್ದರು. ಮಕ್ಕಳಿಗೆ ಸರಿಯಾಗಿ ಉಪಚಾರ ವಸತಿಗೆ ವ್ಯವಸ್ಥೆ ಮಾಡಿಲ್ಲವೆಂದು ಆರೋಪಿಸಿದ್ದಾರೆ. ಹೀಗಾಗಿ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆಯಾಗಿದೆ. ಶಂಕ್ರಮ್ಮ ಸಾವಿಗೆ ಶಿಕ್ಷಕರ ನಿರ್ಲಕ್ಷವೇ ಕಾರಣವೆಂದು ಪೋಷಕರು ಆರೋಪಿಸುತ್ತಿದ್ದಾರೆ. ಮೃತ ವಿದ್ಯಾರ್ಥಿನಿಯ ಶಿವ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ವಿದ್ಯಾರ್ಥಿನಿಯ ಸಾವಿನ ಕುರಿತು ಪೋಷಕರು ಇನ್ನೂ ದೂರು ದಾಖಲು ಮಾಡಿಲ್ಲ.