ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ತಾಲೂಕಿನ ಗಣೇಶ ಗುಡಿಯ ಬಾಡಗುಂದದ ಹೋಂಸ್ಟೇಯೊಂದರ ಈಜುಕೊಳದಲ್ಲಿ 6 ವರ್ಷದ ಬಾಲಕನೋರ್ವ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಬಾಲಕನನ್ನು ಹುಸೇನೈನ್ ರಹೀಮ್ ಖಾನ್ (06) ಎಂದು ತಿಳಿದುಬಂದಿದೆ. ಬಲ್ಲ ಮೂಲಗಳ ಪ್ರಕಾರ ಬೆಳಗಾವಿಯಿಂದ ಪ್ರವಾಸಕ್ಕೆಂದು ಕುಟುಂಬಸ್ಥರ ಜೊತೆ ಗಣೇಶಗುಡಿಯ ಬಾಡಗುಂದದ ಅಶೋಕ ಹೋಮ್‌ಸ್ಟೇಗೆ ಬಂದಿದ್ದ ಈ ಬಾಲಕ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿಬಂದಿದೆ.
ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಾಲಕ ಹುಸೇನೈನ್ ರಹೀಮ್ ಖಾನ್ ಮೃತಪಟ್ಟಿದ್ದಾನೆ. ಆಸ್ಪತ್ರೆಯಲ್ಲಿ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ರಜೆ ಸಮಯವನ್ನು ಕಳೆಯಲು ಬಂದ ಕುಟುಂಬಕ್ಕೆ ಇದೀಗ ಬಾಲಕನ ಸಾವು ಬಿಗ್ ಶಾಕ್ ನೀಡಿದೆ.