ಜತ್ತ : ನಿನ್ನೆ ಬೆಂಗಳೂರಿನ ನೆಲಮಂಗಲದ ಬಳಿ ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಕಂಟೆನರ್ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ IAST ಕಂಪನಿ ಮಾಲೀಕ ಚಂದ್ರಮ್ ಏಗಪ್ಪಗೋಳ್ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳು ಸೇರಿ ಆರು ಜನರು ಅಪ್ಪಚ್ಚಿಯಾಗಿ ಸಾವನಪ್ಪಿರುವ ಘಟನೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಿತ್ತು. ಇದೀಗ ಮೃತಪಟ್ಟ 6 ಜನರ ಮೃತ ದೇಹಗಳು ಮಹಾರಾಷ್ಟ್ರದ ಜತ್ತ ತಾಲೂಕಿನ ಮೊರಬಗಿ ಗ್ರಾಮಕ್ಕೆ ತಲುಪಿ, ಒಂದೇ ಸ್ಥಳದಲ್ಲಿ 6 ಜನರ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿತು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೂರು ಆಂಬುಲೆನ್ಸ್ಗಳಲ್ಲಿ 6 ಜನರ ಮೃತ ದೇಹ ತಲುಪಿದೆ.ಒಂದೇ ಕುಟುಂಬದ ಆರು ಜನರು ಮೃತ ಪಟ್ಟಿದ್ದಕ್ಕೆ ಇಡೀ ಗ್ರಾಮಸ್ಥರು ಇದೀಗ ಕಣ್ಣೀರಿಟ್ಟಿದ್ದಾರೆ.ಇದೀಗ ಗ್ರಾಮದ ಜನರ ಸಮ್ಮುಖದಲ್ಲಿ ಲಿಂಗಾಯತ ಸಮುದಾಯದಂತೆ ಈ ಒಂದು ಅಂತ್ಯಕ್ರಿಯೆ ನಡೆದಿದ್ದು, ಚಂದ್ರಮ್ ಏಗಪ್ಪಗೋಳ್ ಅವರ ಸಹೋದರ ಮಲ್ಲಿನಾಥ್ ಅಗ್ನಿ ಸ್ಪರ್ಶಿಸಿದ್ದಾರೆ. ಬಡತನದಲ್ಲಿ ಬೆಳೆದು ಚಂದ್ರನ್ ಏಗಪ್ಪಗೋಳ್ ಅತಿ ದೊಡ್ಡ ಸಾಧನೆ ಮಾಡಿದ್ದರು. ತನ್ನ ಗ್ರಾಮದ ನೂರಾರು ಯುವಕರಿಗೆ ಚಂದ್ರಮ್ ಅವರು ಕೆಲಸ ಕೊಟ್ಟಿದ್ದರು. ಐಎಎಸ್‌ಟಿ ಕಂಪನಿಯ ಮಾಲೀಕರಾಗಿದ್ದರು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಐಎಎಸ್‌ಟಿ ಸಾಫ್ಟ್ವೇರ್ ಕಂಪನಿ ಮಾಲೀಕರಾಗಿದ್ದರು ಇದೀಗ ಸ್ವ ಗ್ರಾಮ ವರದಿಯಲ್ಲಿ ನೀರವ ಮೌನ ಆವರಿಸಿದೆ.
ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಮೂಲದವರಾದ ಚಂದ್ರಮ್ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಿದ್ದರು. ಐಎಎಸ್ಟಿ ಸಾಫ್ಟ್ವೇರ್ ಕಂಪನಿ ಮಾಲೀಕರಾಗಿದ್ದರು. ತಂದೆಗೆ ಹುಷಾರಿಲ್ಲ ಅಂತ ಕುಟುಂಬ ಸಮೇತ ವಿಜಯಪುರಕ್ಕೆ ಹೊರಟಿದ್ದರು.ಬೆಂಗಳೂರಿನ ನೆಲಮಂಗಲ ತಾಲೂಕಿನ ತಾಳೆಕೆರೆ ಬಳಿ ಪಕ್ಕದ ರಸ್ತೆಯಿಂದ ಏಕಾಏಕಿ ಮೇಲೆರಗಿ ಬಂದ ಕಂಟೇನರ್ ಚಂದ್ರಮ್ ಕುಟುಂಬ ಪ್ರಯಾಣಿಸ್ತಿದ್ದ ಕಾರಿನ ಮೇಲೆ ಬಿದ್ದಿತ್ತು. ಲಾರಿ ಬಿದ್ದ ರಭಸಕ್ಕೆ ಕಾರು ಅಪ್ಪಚ್ಚಿಯಾಗಿದ್ದು, ಕಾರಿನಲ್ಲಿದ್ದ 6 ಜೀವಗಳು ಕ್ಷಣಮಾತ್ರದಲ್ಲಿ ಉಸಿರು ಚೆಲ್ಲಿವೆ.
ಐಎಎಸ್ಟಿ ಸಾಫ್ಟ್ವೇರ್ ಸಲ್ಯೂಷನ್ಸ್ನ ಸಿಇಒ ಆಗಿದ್ದ ಚಂದ್ರಮ್
ಐಎಎಸ್ಟಿ ಸಾಫ್ಟ್ವೇರ್ ಸಲ್ಯೂಷನ್ಸ್ನ ಸಿಇಒ ಆಗಿದ್ದ ಚಂದ್ರಮ್, ಆಟೋಮೋಟಿವ್, ಎಂಬೆಡೆಡ್ ಸಾಫ್ಟ್ವೇರ್ ಡೆವಲ್ಪಮೆಂಟ್ ಕ್ಷೇತ್ರದಲ್ಲಿ 18 ವರ್ಷಗಳಿಂದ ತೊಡಗಿಸಿಕೊಂಡಿದ್ದರು. ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ನಲ್ಲಿ ಸೂರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದುಕೊಂಡಿದ್ದರು. ಹೊಸ ಆಫೀಸ್ ಓಪನ್ ಮಾಡಲು ನಿರ್ಧರಿಸಿದ್ದರು. ಹೊಸ ಆಫೀಸ್ ಕೆಲಸವು ನಡೆಯುತ್ತಿತ್ತು. ನಿನ್ನೆ ರಾತ್ರಿ ಸಿಬ್ಬಂದಿಗಳ ಜೊತೆ ಮೀಟಿಂಗ್ ಮಾಡಿದ್ದರು. ಕೆಲ ದಿನಗಳು ಬರುವುದಿಲ್ಲ ಎಂದು ಹೇಳಿ ಹೋಗಿದ್ದರು.
2018 ರಲ್ಲಿ ಶುರುವಾಗಿದ್ದ ಐಎಎಸ್ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಕಂಪನಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು. ಚಂದ್ರಮ್ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿದು ಸಿಬ್ಬಂದಿಗಳು ಅರ್ಧಕ್ಕೆ ಕೆಲಸ ನಿಲ್ಲಿಸಿದ್ದಾರೆ. ಲಾಗ್ ಔಟ್ ಮಾಡಿ ಬೇಸರದಿಂದ ಮನೆಗೆ ಹೋಗಿದ್ದಾರೆ. ಇವಳೇ ತಂದೆಯನ್ನು ನೋಡಲು ತಿರುಳುತ್ತಿದ್ದ ಸಂದರ್ಭದಲ್ಲಿ ಈ ಒಂದು ಭೀಕರವಾದಂತಹ ಅಪಘಾತ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.