ಜಮ್ಮು ಕಾಶ್ಮೀರ : ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಭಾರತೀಯ ಸೇನೆ ಕಾಶ್ಮೀರದಲ್ಲಿರುವ ಹಲವು ಉಗ್ರರ ಮನೆಗಳನ್ನು ದ್ವಂಸಗೊಳಿಸಿದೆ. ಇದರ ಪ್ರತಿಕಾರಕ್ಕಾಗಿ ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಇದೀಗ ಜಮ್ಮು ಕಾಶ್ಮೀರದ 48 ಪ್ರವಾಸಿ ತಾಣಗಳ ಪ್ರವೇಶಕ್ಕೆ ಕೇಂದ್ರ ಸರ್ಕಾ ನಿಷೇಧ ಹೇರಿದೆ.
ಹೌದು ಉಗ್ರರ ಮನೆಗಳನ್ನು ನೆಲಸಮ ಮಾಡಿದ್ದಕ್ಕೆ ಪ್ರತಿಕಾರಕ್ಕೆ ಸಂಚು ರೂಪಿಸಿದ್ದು, ಕಾಶ್ಮೀರ ಪ್ರವಾಸಿ ತಾಣಗಳನ್ನು ಗುರುಯಾಗಿಸಿಕೊಂಡು ಉಗ್ರರು ದಾಳಿಗೆ ಮತ್ತೆ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ಸ್ಲೀಪರ್ ಸೆಲ್ ಮೂಲಕ ಮಾಹಿತಿ ಪಡೆದು ದಾಳಿಗೆ ಉಗ್ರರು ಸಂಚು ರೂಪಿಸಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಕೇಂದ್ರ ಸರ್ಕಾರ ಇದೀಗ ಅಲರ್ಟ್ ಆಗಿದೆ. ಹಾಗಾಗಿ ಜಮ್ಮು ಕಾಶ್ಮೀರದ 84 ಪ್ರವಾಸಿ ತಾಣಗಳ ಪೈಕಿ 48 ಪ್ರವಾಸಿ ಸ್ಥಾನಗಳಲ್ಲಿ ಪ್ರವೇಶ ನಿಷೇಧಿಸಿದೆ.