ಬೆಂಗಳೂರು : ಬೆಂಗಳೂರಿನಲ್ಲಿ ಪ್ರೇಯಸಿಗಾಗಿ ಕಳ್ಳತನಕ್ಕೆ ಇಳಿದ ಪ್ರಿಯಕರ. ಪ್ರಿಯತಮೆಗಾಗಿ ದುಬಾರಿ ಮೊಬೈಲ್‌ಗಳನ್ನು ಪ್ರಿಯಕರ ಕಳ್ಳತನ ಮಾಡಿದ್ದಾನೆ. ಕಳೆದ ವಾರ ಒಂದೇ ರಾತ್ರಿ ಎರಡು ಶೋ ರೂಮ್ಗೆ ಕನ್ನ ಹಾಕಿದ್ದಾನೆ. 30ಕ್ಕೂ ಹೆಚ್ಚು ದುಬಾರಿ ಮೊಬೈಲ್ ಗಳನ್ನ ಕಳ್ಳತನ ಮಾಡಿದ್ದಾನೆ.
ಸ್ನೇಹಿತನೊಂದಿಗೆ ಸೇರಿ ಸುಮಾರು 30ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಮೊಬೈಲ್ ಕಳ್ಳತನ ಮಾಡಿದ್ದಾನೆ. ಪತಿ ಬಿಟ್ಟು ಮಹಿಳೆ ಅಸ್ಮಿತ ಕಳ್ಳನ ಜೊತೆಗೆ ಲಿವ್ ಇನ್ ರಿಲೇಶನ್ ನಲ್ಲಿ ಇದ್ದಳು ಪ್ರಿಯಕರ ತಂದುಕೊಟ್ಟ ಮೊಬೈಲ್ ಅನ್ನು ಪ್ರೇಯಸಿ ಸೇಲ್ ಮಾಡುತ್ತಿದ್ದಳು. ಪ್ರಿಯಕರ ದಿವಾಸ್ ಗೆಳೆಯ ಆರೋಹನ ಹಾಗೂ ಪ್ರೇಯಸಿ ಅಸ್ಮಿತಾಳನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.
ಪ್ರಿಯಕರ ಕಳ್ಳತನ ಮಾಡಿ ಗಿಫ್ಟ್ ಕೊಡಬೇಕು ಅಂತ ಅಲ್ಲ. ಕದ್ದ ಮೊಬೈಲ್ ಗಳನ್ನ ಅಸ್ಮಿತಾಗೆ ತಂದು ಆತ ಕೊಡುತ್ತಿದ್ದ ಪ್ರೇಯಸಿ ಅಸ್ಮಿತ ಅದನ್ನು ಮಾರಾಟ ಮಾಡುತ್ತಿದ್ದಳು 30 ಲಕ್ಷದ ಒಟ್ಟು 28 ಮೊಬೈಲ್ ಹಾಗೂ ವಾಚ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವರ್ತೂರು ಪೋಲಿಸರಿಂದ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ಮೊಬೈಲ್ ಗಳು ಹಾಗೂ ವಾಚ್ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.








