ಕಲಬುರಗಿ : ಕಳೆದ ಎರಡು ದಿನಗಳ ಹಿಂದೆ ಕಲಬುರ್ಗಿ ಜೇವರ್ಗಿ ರಸ್ತೆಯಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಕಿಡಿಗೇಡಿ ಒಬ್ಬ ಚಪ್ಪಲಿ ಹಾರ ಹಾಕಿರುವ ಘಟನೆ ವಾಸುವ ಮುನ್ನವೇ ಕಲಬುರ್ಗಿಯ ಹಾಸ್ಟೆಲ್ ಒಂದರಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪೂಜೆಗೆ ಬರಲಿಲ್ಲವೆಂದು ವಿದ್ಯಾರ್ಥಿಯನ್ನು ಅರಬೆತ್ತಲೆ ಮಾಡಿ ಬರವಣಿಗೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಹಾಸ್ಟೆಲಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಂಬಂಧ ಗಲಾಟೆ ನಡೆದಿದ್ದು, ವಿದ್ಯಾರ್ಥಿಯೊಬ್ಬ ಪೂಜೆಗೆ ಬರಲ್ಲ ಎಂದಿದ್ದಕ್ಕೆ ಸಹ ವಿದ್ಯಾರ್ಥಿಗಳಿಂದ ಬಾಲಕನಿಗೆ ತಿಳಿಸಿರುವ ಘಟನೆ ಕಲಬುರ್ಗಿ ಹೈಕೋರ್ಟ್ ಬಳಿ ಇರುವ ಹಾಸ್ಟೆಲ್ ನಲ್ಲಿ ನಡೆದಿದೆ.
ವಿದ್ಯಾರ್ಥಿ ಅರೆಬೆತ್ತಲೆ ಮಾಡಿ ಅಂಬೇಡ್ಕರ್ ಫೋಟೋ ಕೊಟ್ಟು ಮೆರವಣಿಗೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ವಿದ್ಯಾರ್ಥಿಯನ್ನು ಹಿಗ್ಗಾ ಮುಗ್ಗ ಥಳಿಸಿದ್ದಾರೆ. ನಂತರ ಬಾಲಕರು ಅರೆಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಪೂಜೆಗೆ ಬರಲಿಲ್ಲವೆಂದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ.ಕಲ್ಬುರ್ಗಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.