ಕೊಪ್ಪಳ : ಕೊಪ್ಪಳದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಬಸ್ ಒಂದು ನಿಯಂತ್ರಣ ಕಳೆದುಕೊಂಡು ಪಾರ್ಟಿಯಾದ ಪರಿಣಾಮ ಏಳು ವರ್ಷದ ಬಾಲಕ ನೊಬ್ಬ ಸಾವನ್ನಪ್ಪಿದ್ದು ಬಸ್ ನಲ್ಲಿದ್ದ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ, ಯಲಬುರ್ಗಾ ತಾಲೂಕಿನ ಹೊಸಳ್ಳಿ ಕ್ರಾಸ್ ಬಳಿ ನಡೆದಿದೆ.
ಮೃತ ಬಾಲಕನನ್ನು ಬಾನಾಪುರದ ವಿವೇಕ್ (9) ಎಂದು ತಿಳಿದುಬಂದಿದ್ದು, ಬೆಂಗಳೂರಿನಿಂದ ಗಜೇಂದ್ರಗಡಕ್ಕೆ ತೆರಳುತ್ತಿದ್ದ ಬಾಲಾಜಿ ಟ್ರಾವೆಲ್ಸ್ ನ ಬಸ್ ಅಪಘಾತಕ್ಕೊಳಗಾಗಿದ್ದು, ಚಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಬಸ್ಸಿನಲ್ಲಿ ಒಟ್ಟು 15 ಜನ ಪ್ರಯಾಣ ಮಾಡುತ್ತಿದ್ದರು, ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಐದು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಯಲಬುರ್ಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಚಾಲಕ ಪರಾರಿ ಪರಾರಿಯಾಗಿದ್ದು , ಯಲಬುರ್ಗಾ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.