ಹಾವೇರಿ : ಶಾಲೆಯ ಬಳಿ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರಿನ ತೊಟ್ಟಿಗೆ ಬಾಲಕನೊಬ್ಬ ಬಿದ್ದು ಮುಳುಗಿ ದಾರುಣವಾಗಿ ಸಾವನಪ್ಪಿರುವ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಪ್ರಜ್ವಲ್ (9) ಎಂದು ತಿಳಿದುಬಂದಿದೆ. ನಿನ್ನೆ ಸಾಯಂಕಾಲ ಶಾಲೆ ಮುಗಿದ ತಕ್ಷಣ ಪ್ರಜ್ವಲ್ ಮನೆಗೆ ಬಂದು ಬಳಿಕ ಹೊರಗಡೆ ಆಟ ಆಡಲು ತೆರಳಿದ್ದಾನೆ.ಈ ವೇಳೆ ಶಾಲೆಯ ಬಳಿ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರಿನ ತೊಟ್ಟಿಗೆ ಬಿದ್ದಿದ್ದಾನೆ.ಸಂಜೆಯಾದರೂ ಪ್ರಜ್ವಲ್ ಮನೆಗೆ ಬಾರದೇ ಇರುವುದನ್ನು ಗಮನಿಸಿದ ಮನೆಯವರು ಗಾಬರಿಗೊಂಡು ಎಲ್ಲಾ ಕಡೆ ಹುಡುಕಾಡಿದ್ದಾರೆ.
ಕೊನೆಗೆ ನೀರಿನ ತೊಟ್ಟಿಯಲ್ಲಿ ಪ್ರಜ್ವಲ್ ಬಿದ್ದು ಮುಳುಗಿ ಸಾವನ್ನಪ್ಪಿರುವುದು ಗೊತ್ತಾಗಿದೆ.ಬಾಲಕನ ಮೃತದೇಹವನ್ನು ನೀರಿನ ತೊಟ್ಟಿಯಿಂದ ಮೇಲಕ್ಕೆತ್ತಿ ರಟ್ಟೀಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ದಾಖಲಿಸಲಾಗಿದೆ.ಘಟನೆ ಕುರಿತಂತೆ ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.