ಬೆಂಗಳೂರು : ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಬಿಬಿಎಂಪಿ ಲಾರಿ ಚಾಲಕ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಿಸದೇ ಬಿಬಿಎಂಪಿ ಲಾರಿ ಚಾಲಕ ಕೊಂಡಯ್ಯ ಇದೀಗ ಸಾವನ್ನಪ್ಪಿದ್ದಾರೆ.ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಿಬಿಎಂಪಿ ಲಾರಿ ಚಾಲಕ ಕೊಂಡಯ್ಯ ಇಂದು ಸಾವನ್ನಪ್ಪಿದ್ದಾರೆ.
ಕಳೆದ ಮಾರ್ಚ್ 19 ರಂದು ಬಿಬಿಎಂಪಿ ಲಾರಿ ಬೈಕ್ ಸ್ಥಳದಲ್ಲೇ ಸಾವನಪ್ಪಿದ್ದ. ಈ ವೇಳೆ ಬಿಬಿಎಂಪಿ ಲಾರಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದರು. ಬಳಿಕ ಸ್ಥಳೀಯ ನಿವಾಸಿಗಳು ಕೊಂಡಯ್ಯನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದರು. ಲಾರಿ ಚಾಲಕ ಕೊಂಡೊಯ್ಯನ ಮೇಲೆ ಸ್ಥಳಿಯ ನಿವಾಸಿಗಳು ಭೀಕರವಾಗಿ ಹಲ್ಲೆ ಮಾಡಿದ್ದರು.
ತಕ್ಷಣ ಲಾರಿ ಚಾಲಕ ಕೊಂಡಯ್ಯನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಚಾಲಕ ಕೊಂಡಯ್ಯ ಗಂಭೀರ ಸ್ಥಿತಿಗೆ ತಲುಪಿದ್ದ. ಆದರೆ ಇಂದು ಚಿಕಿತ್ಸೆ ಫಲಿಸದೆ ಲಾರಿ ಚಾಲಕ ಕೊಂಡಯ್ಯ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಸಂಭಂದ ಈಗಾಗಲೇ ಹಲ್ಲೆ ಮಾಡಿದ ಹಾಗೂ ಲಾರಿಗೆ ಬೆಂಕಿ ಹಚ್ಚಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆ.