ಚೆನ್ನೈ: ಚೆನ್ನೈನ ಕ್ರೋಮ್ ಪೇಟೆಯಲ್ಲಿರುವ ಮದ್ರಾಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಅಣ್ಣಾ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕಚೇರಿಗೆ ಇಮೇಲ್ ಮೂಲಕ ಬೆದರಿಕೆ ಬಂದಿದ್ದು, ಬಾಂಬ್ ತಜ್ಞರು ಮತ್ತು ಪೊಲೀಸರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಶೋಧ ನಡೆಸಿದ್ದಾರೆ.
ಈ ಬಗ್ಗೆ ತಾಂಬರಂ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದ 6 ಬಾಂಬ್ ತಜ್ಞರ ತಂಡ ಎಂಐಟಿ ಕಾಲೇಜಿಗೆ ತೆರಳಿ ಬಾಂಬ್ ಇರುವಿಕೆಯನ್ನು ಪರಿಶೀಲಿಸಿತು








