ರಾಮನಗರ : ರಾಮನಗರ ಜಿಲ್ಲೆಯ ಬಿಡದಿ ಬಳಿ ಇರುವ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಕೂಡಲೇ ಸ್ಥಳಕ್ಕೆ ಬಿಡದಿ ಠಾಣೆ ಪೋಲಿಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲದ್ದರಿಂದ ಇದು ಒಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ಸ್ಪಷ್ಟಪಡಿಸಿದರು.
ಇಂಗ್ಲಿಷ್ ಬಳಸಿ ಉರ್ದು ಭಾಷೆಯಲ್ಲಿ ಆಗಸ್ಟ್ 3 ರಂದು ಕಳುಹಿಸಿದ್ದ ಬಾಂಬ್ ಬೆದರಿಕೆ ಸಂದೇಶ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ನಾಳೆ ಭಾನುವಾರ ವಂಡರ್ ಲಾದಲ್ಲಿ 3 ಬಾಂಬ್ ಸ್ಫೋಟಿಸುತ್ತೇವೆ. ಮುಸ್ಲಿಮರ ಮೇಲೆ ದಬ್ಬಾಳಿಕೆ ಮಾಡುವವರಿಗೆ ಶಿಕ್ಷೆಯಾಗಲಿದೆ. ಕನ್ನಡದ ಕಾಫಿರರಿಗೆ ಶಿಕ್ಷೆ ಆಗಲಿದೆ ಎಂದು ಬೆದರಿಕೆ ಸಂದೇಶವನ್ನು ಬಂದಿದೆ.
ಮೊಹಮ್ಮದ್ ಇರ್ಫಾನ್ ಜಾದಿ ಎಂಬ ಹೆಸರಿನ ಮೇಲ್ ಐಡಿ ಇಂದ ಬೆದರಿಕೆ ಸಂದೇಶ ಬಂದಿದೆ.ಆಗಸ್ಟ್ 3 ರಂದೆ ಈ ಒಂದು ಇಮೇಲ್ ಸಂದೇಶ ಬಂದಿದ್ದು.ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಕೂಡಲೇ ಪಾರ್ಕ್ ಗೆ ಪೊಲೀಸರು ಭೇಟಿ ನೀಡಿದ್ದು, ಪೊಲೀಸರ ಪರಿಶೀಲನೆಯ ವೇಳೆ ಯಾವುದೇ ಸ್ಪೋಟಕ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಇದೊಂದು ಹುಸಿ ಬಾಂಬ್ ಸಂದೇಶ ಎಂದು ದೃಢಪಡಿಸಿದ್ದಾರೆ. ಇ-ಮೇಲ್ ಮಾಡಿದ್ದ ಆರೋಪಿಗಾಗಿ ಇದೀಗ ಬಿಡದಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.