ಬೆಂಗಳೂರು : ಬೆಂಗಳೂರಲ್ಲಿ ಮತ್ತೆ ಶಾಲೆ ಒಂದಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಶಾಲೆಗೆ ಬಾಂಬ್ ಬೆದರಿಕೆ ಕುರಿತು ಇ ಮೆಲ್ ಸಂದೇಶ ಬಂದಿದೆ ಎಂದು ತಿಳಿದುಬಂದಿದೆ. ಜನವರಿ 28 ರಂದು ಶಾಲೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎಂದು ತಿಳಿದು ಬಂದಿದೆ.ಬೆಳಗ್ಗೆ 10:20ಕ್ಕೆ ಬ್ಲಾಸ್ಟ್ ಆಗುತ್ತೆ ಎಂದು ಇಮೇಲ್ ಸಂದೇಶ ಬಂದಿದೆ. ಮಾಹಿತಿ ಬಂದ ಕೂಡಲೇ ಪೊಲೀಸರು ಸ್ಥಳವನ್ನು ಪರಿಶೀಲಿಸಿದರು ಅಲ್ಲದೆ ಬಾಂಬ್ ನಿಷ್ಕ್ರಿಯ ದಳದವರು ಕೂಡ ಬಂದು ಪರಿಶೀಲಿಸಿದ್ದಾರೆ.
ಕೇಂದ್ರೀಯ ವಿದ್ಯಾಲಯ ಭಾರತೀಯ ವಿದ್ಯಾ ಸಂಸ್ಥೆಗೆ ಬೆದರಿಕೆ ಮೇಲ್ Sahukarisrinivasrav@65 gmail.com ಎಂಬ ಮೆಲ್ id ಇಂದ ಸಂದೇಶ ಬಂದಿದೆ. ಕೇಂದ್ರೀಯ ವಿಶ್ವವಿದ್ಯಾಲಯ ಪ್ರಿನ್ಸಿಪಾಲ್ ಅಮೃತ್ಪಾಲರು ದೂರು ನೀಡಿದ್ದಾರೆ ಜನವರಿ 28ರಂದು ಶಾಲೆಗೆ ಬಂದಿರುವ ಬೆದರಿಕೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಬಾಂಬ ನಿಶ್ಕ್ರಿಯ ದಳದವರು ಬಂದು ಪರಿಶೀಲಿ ನಡೆಸಿದಾಗ ಸ್ಫೋಟಕವಾಗುವ ಯಾವುದೇ ವಸ್ತುಗಳು ಕೂಡ ಈ ವೇಳೆ ಅವರಿಗೆ ಸಿಕ್ಕಿಲ್ಲ ಆದ್ದರಿಂದ ಇದೊಂದು ಹೊಸ ಬೆದರಿಕೆ ಪ್ರಕರಣ ಎಂದು ತಿಳಿಸಿದ್ದಾರೆ.ಮತ್ತೊಮ್ಮೆ ಶಾಲೆಗಳಿಗೆ ಬೆದರಿಕೆ ಮೇಲು ಕಳುಹಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೆ ಕಳೆದ ವರ್ಷ ಡಿಸೆಂಬರ್ ಅಲ್ಲಿ ಬೆಂಗಳೂರಿನ ಹಲವು ಖಾಸಗಿ ಶಾಲೆಗಳಿಗೆ ಇಮೇಲ್ ಬೆದರಿಕೆ ಬಂದಿದ್ದು, ಇಡೀ ಸಿಲಿಕಾನ್ ಸಿಟಿ ಬೆಚ್ಚಿಬೀಳಿಸುವಂತೆ ಮಾಡಿದೆ, ಯಾಕಂದ್ರೆ ಈ ಹಿಂದೆ ಬಂದ ಬೆದರಿಕೆಗಳು ಬೇರೆ. ಈಗ ಬಂದ ಬೆದರಿಕೆ ಇಮೇಲ್ನಲ್ಲಿ ಉಗ್ರವಾದ ಪದ ಬಳಿಕೆ ಮಾಡಲಾಗಿದೆ. ಹೀಗಾಗಿ ಇದು ಆತಂಕಕ್ಕೆ ಕಾರಣವಾಗಿತ್ತು.
ಮುಖ್ಯವಾಗಿ ಬೆದರಿಕೆ ಇಮೇಲ್ನಲ್ಲಿ ಉಗ್ರವಾದ ಪದಗಳ ಉಲ್ಲೇಖವಾಗಿದ್ದರಿಂದ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇನ್ನು ಸುರಕ್ಷತಾ ದೃಷ್ಟಿಯಿಂದ ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಮನೆಗೆ ಕಳುಹಿಸುತ್ತಿದೆ. ಕೆಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ, ಯಾವೆಲ್ಲಾ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು.