ನವದೆಹಲಿ : ದುಷ್ಕರ್ಮಿಗಳಿಂದ ದೆಹಲಿಯ ನಾಲ್ಕು ಕೋರ್ಟ್ ಗಳಿಗೆ ಹಾಗೂ ಎರಡು ಸಿಆರ್ಪಿಎಫ್ ಶಾಲೆಗಳಿಗೆ ಬಾಂಬ್ ಸಂದೇಶ ಬಂದಿದೆ. ದುಷ್ಕರ್ಮಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದಾರೆ.ಜೈಶ್ ಉಗ್ರ ಸಂಘಟನೆ ಹೆಸರಲ್ಲಿ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ.
ನಾಲ್ಕು ಕೋರ್ಟ್ ಗಳಿಗೆ ಹಾಗೂ ಎರಡು ಸಿಆರ್ ಪಿಎಫ್ ಶಾಲೆಗಳಿಗೆ ಬಾಂಬ್ ಸಂದೇಶ ಬಂದಿದೆ.ಕೂಡಲೇ ತಕ್ಷಣ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಶಿ ಪರಿಶೀಲನೆ ಮಾಡುತ್ತಿದ್ದು, ಈ ಕುರಿತು ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತಿದೆ.







