ಉತ್ತರಪ್ರದೇಶ : ಉತ್ತರ ಪ್ರದೇಶದ ಕುಟುಂಬ ಕಲ್ಯಾಣ ಕಚೇರಿಗೆ ಇದೀಗ ಬೆದರಿಕೆ ಸಂದೇಶವೊಂದು ಬಂದಿದೆ. ಅನಾಮಧೇಯ ಹೆಸರಿನಲ್ಲಿ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಇಂದು ಮಧ್ಯಾಹ್ನ 1:30ಕ್ಕೆ ಕಚೇರಿಗೆ ಇ-ಮೇಲ್ ಸಂದೇಶ ಬಂದಿದೆ.
ಕಚೇರಿಗೆ ಬೆದರಿಕೆ ಇ-ಮೇಲ್ ಸಂದೇಶ ನೋಡುತ್ತಿದ್ದಂತೆ ಸಿಬ್ಬಂದಿಗಳು ತಕ್ಷಣ ಹೊರಗಡೆ ಓಡಿ ಬಂದಿದ್ದಾರೆ. ಲಖನೌನ ಜಗತ್ ನಾರಾಯಣ ರಸ್ತೆಯಲ್ಲಿರುವ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಬಾಂಬ್ ಪತ್ತೆ ಸಂದೇಶ ಹಿನ್ನೆಲೆ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗು ಶ್ವಾನದಳ ಪರಿಶೀಲನೆ ನಡೆಸುತ್ತಿದೆ.