ಬೆಂಗಳೂರು : ಇಂದು ಬೆಳಿಗ್ಗೆ ತಾನೇ ಹಾಸನದ 3 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ಇದರ ಬೆನ್ನಲ್ಲೆ ಇದೀಗ ಬೆಂಗಳೂರಿನ ಹಲವು ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.
ಹೈದರಾಬಾದ್ ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಒಂದು ವೇಳೆ ನ್ಯಾಯ ಕೊಡಿಸದಿದ್ದರೆ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಇ ಮೇಲ್ ಸಂದೇಶ ಬಂದಿದೆ. ರಾಜರಾಜೇಶ್ವರಿ ನಗರ, ಕುಂಬಳಗೋಡು, ಕಲಾಸಿಪಾಳ್ಯದ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಖಾಸಗಿ ಶಾಲೆಗಳನ್ನು ಬಾಮನಿಂದ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶ ಬಂದಿದೆ ಸಂದೇಶ ಪಂದ ತಕ್ಷಣ ಶಾಲೆಗಳಿಗೆ ಪೊಲೀಸರು ಭೇಟಿ ನೀಡಿದ್ದಾರೆ ಶ್ವಾನ ದಳ, ಬಾಂಬ್ ಪತ್ತೆ ದಳದಿಂದ ಖಾಸಗಿ ಶಾಲೆಗಳಲ್ಲಿ ತಪಾಸನೆ ನಡೆಸಲಾಗುತ್ತಿದೆ.
ಹಾಸನದ 3 ಶಾಲೆಗಳಿಗೂ ಬೆದರಿಕೆ ಸಂದೇಶ
ಹಾಸನದ 3 ಖಾಸಗಿ ಶಾಲಾ ಕಾಲೇಜಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಹಾಸನದ ಮೂರು ಶಾಲೆಗಳಿಗೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಇ-ಮೇಲ್ ಬೆದರಿಕೆ ಸಂದೇಶ ಬಂದಿದೆ. ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್ ಗೆ ಇಮೇಲ್ ಸಂದೇಶ ಬಂದಿದೆ.ಹಾಸನದ ವಿಜಯನಗರ, ಇಂಡಸ್ಟ್ರಿಯಲ್ ಏರಿಯಾ ಮತ್ತು ಕೆ ಆರ್ ಪುರಂ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
1 ಗಂಟೆ ಒಳಗೆ ಕಟ್ಟಡ ಸ್ಪೋಟಿಸುವುದಾಗಿ ದುಷ್ಕರ್ಮಿಯೋಬ್ಬ ಇ-ಮೇಲ್ ಸಂದೇಶ ಕಳುಹಿಸಿದ್ದಾನೆ. ವಿದ್ಯಾಸೌಧ ಶಾಲೆ ಹಾಗು ಕಿಡ್ಸ್ ಶಾಲೆ ಮಂಜೇಗೌಡ ಎಂಬವರಿಗೆ ಸೇರಿದೆ. ಹಾಸನ ನಗರ ಗ್ರಾಮಾಂತರ ಠಾಣೆಗೆ ಇದೀಗ ಪ್ರಾಂಶುಪಾಲರು ಈ ಕುರಿತು ದೂರು ನೀಡಿದ್ದಾರೆ. ತಡರಾತ್ರಿಯೆ ಪೊಲೀಸರು ಮತ್ತು ಬಾಂಬಬ್ ನಿಷ್ಕ್ರಿಯದಳ ಪರಿಶೀಲನೆ ನಡೆಸಿದ್ದಾರೆ.