ಮೈಸೂರು : ಮೈಸೂರಿನ ಹಳೆ ಕೋರ್ಟಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಅನಾಮಿಕ ವ್ಯಕ್ತಿಯಿಂದ ಈ ಒಂದು ಬೆದರಿಕೆ ಸಂದೇಶ ಬಂದಿದ್ದು ತಕ್ಷಣ ನ್ಯಾಯಾಧೀಶರು ಕೋರ್ಟ್ ಆವರಣ ಬಿಟ್ಟು ಹೊರಗಡೆ ಬಂದಿದ್ದಾರೆ.
ಹಳೆ ಕೋರ್ಟ್ ನಲ್ಲಿ ಬಾಂಬೆಟ್ಟಿರುವುದಾಗಿ ಕಿಡಿಗಿಡಿ ಒಬ್ಬ ಬೆದರಿಕೆ ಸಂದೇಶ ಕಳುಹಿಸಿದ್ದಾನೆ ತಕ್ಷಣ ಕೋರ್ಟ್ ನಿಂದ ನ್ಯಾಯಾಧೀಶರು ಕಕ್ಷಿದಾರರು ಹಾಗೂ ವಕೀಲರು ಹೊರಗಡೆ ಓಡಿ ಬಂದಿದ್ದಾರೆ ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು ಕೋರ್ಟ್ ಆವರಣ ಹಾಗೂ ಒಳಗೆ ಹೊರಗಡೆ ಪರಿಶೀಲನೆ ಮಾಡುತ್ತಿದ್ದಾರೆ.








