ಬೆಂಗಳೂರು : ಬೆಂಗಳೂರಿನ ಜೆ.ಪಿ.ನಗರದ 4ನೇ ಹಂತದಲ್ಲಿರುವ ‘ಬ್ರಾಡ್ ಕಾಂ’ ಕಂಪನಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಬೆದರಿಕೆ ಮೇಲ್ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇ-ಮೇಲ್ ನೋಡುತ್ತಿದ್ದಂತೆ ಸ್ಥಳೀಯ ಪೊಲೀಸ್ ಇನ್ನಿತರ ಸರ್ಕಾರಿ ಅಧಿಕಾರಿಗಳಿಗೆ ಸಿಬ್ಬಂದಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಒಟೆರಾ ಹೋಟೆಲ್ನಲ್ಲಿ ಅತ್ಯಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿ, ಬಾಂಬ್ ಸ್ಕ್ವಾಡ್ ಕರೆಯಿಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಹೋಟೆಲ್ಗಳ ಮುಂದೆ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕಳೆದ 2024 ಮೇ 23 ರಂದು ಕೂಡ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿರುವ ಮೂರು ಫೈವ್ ಸ್ಟಾರ್ ಹೋಟೆಲ್ಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿತ್ತು. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರಮುಖ ಒಟೆರಾ ಹೋಟೆಲ್ ಸೇರಿದಂತೆ ಬೆಂಗಳೂರಿನ ಮೂರು ಹೋಟೆಲ್ಗಳಿಗೆ ಮುಂಜಾನೆ ಬಾಂಬ್ ಬೆದರಿಕೆ ಇಮೇಲ್ಗಳು ಬಂದಿದ್ದು, ಈ ಮೂಲಕ ಬೆಳ್ಳಂಬೆಳಗ್ಗೆ ಹೋಟೆಲ್ ಮಾಲೀಕರಿಗೆ, ಸಿಬ್ಬಂದಿ ಶಾಕ್ ಆಗಿತ್ತು.