ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಚೆನ್ನಗಿರಿ ರಸ್ತೆಯಲ್ಲಿರುವ ರೈಸ್ ಮಿಲ್ ನಲ್ಲಿ ಬಾಯ್ಲರ್ ಸ್ಪೋಟಗೊಂಡು ಕಟ್ಟಡ ಕುಹಿತವಾಗಿದೆ ಈ ಒಂದು ಕಟ್ಟಡ ಕುಸಿತದಲ್ಲಿ ಹಲವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ.
ಹೌದು ಚೆನ್ನಗಿರಿ ರಸ್ತೆಯಲ್ಲಿರುವ ಹೀಗೆ ಬಾಗಿಯಲ್ಲಿ ಇರುವಂತಹ ರೈಸ್ ಮಿಲ್ ನಲ್ಲಿ ಬೈಲರ್ ಸ್ಫೋಟಗೊಂಡು ಕಟ್ಟಡ ಕುಸಿದಿದೆ. ಈ ಒಂದು ಕಟ್ಟಡ ಕುಸಿತದಲ್ಲಿ ಐದಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಇನ್ನು ಅವಶೇಷಗಳ ಅಡಿ ಮತ್ತೋರ್ವ ವ್ಯಕ್ತಿ ಸಿಲುಕಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯಚರಣೆ ನಡೆಸಿದೆ.