ತುಮಕೂರು : ನಿನ್ನೆ ಬೆಂಗಳೂರಿನ ಯಲಹಂಕದ ರೈಲು ನಿಲ್ದಾಣದ ಬಿನ್ ನಲ್ಲಿ ನವಜಾತ ಗಂಡು ಮಗುವಿನ ಶವ ಪತ್ತೆಯಾದ ಬಳಿಕ ಇದೀಗ ತುಮಕೂರು ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಎರಡರಿಂದ ಮೂರ ದಿವಸದ ಹಸುಗೂಸಿನ ಶವ ಪತ್ತೆಯಾಗಿದೆ.
ಹೌದು ತುಮಕೂರು ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಎರಡರಿಂದ ಮೂರ ದಿವಸದ ಹಸುಗೂಸಿನ ಶವ ಪತ್ತೆಯಾಗಿದೆ. ನಿಲ್ದಾಣದಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಗು ಕಂಡು ಬಂದಿದ್ದು ಮಗುವಿನ ಶವವನ್ನು ಕಂಡ ಪ್ರಯಾಣಿಕರೊಬ್ಬರು ಪೊಲೀಸಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ನಿನ್ನೆ ಯಲಹಂಕದ ರೈಲು ನಿಲ್ದಾಣದ ಡಸ್ಟ್ ಬಿನ್ ನಲ್ಲಿ ನವಜಾತ ಗಂಡು ಮಗುವಿನ ಶವ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಯಲಹಂಕ ರೈಲ್ವೆ ನಿಲ್ದಾಣಕ್ಕೆ ಬಂದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನ ಡೆಸ್ಟ್ ಬಿನ್ ನಲ್ಲಿ ನವಜಾತ ಗಂಡು ಮಗುವಿನ ಶವವನ್ನು ಇಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮಗು ಡಸ್ಟ್ ಬಿನ್ ನಲ್ಲಿ ನರಳಿ ನರಳಿ ಪ್ರಾಣ ಬಿಟ್ಟಿದೆ.
ಗಂಡು ಮಗುವಿನ ಶವವನ್ನು ನಿನ್ನೆ ಮುಂಜಾನೆ ಭುವನೇಶ್ವರದಿಂದ ಬೆಂಗಳೂರಿಗೆ ಆಗಮಿಸಿದ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಮಗುವಿನ ಶವ ಪತ್ತೆಯಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.