ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಬಿಎಂಟಿಸಿ ಬಸ್ ಅಪಘಾತ ಸಂಭವಿಸಿದ್ದು ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ರಸ್ತೆಯಲ್ಲಿ ವಾಹನಗಳಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಗೋರಿಪಾಳ್ಯ ಜಂಕ್ಷನ್ ನಲ್ಲಿ ನಿಂತಿದ್ದ ಎರಡು ಆಟೋ ಮತ್ತು ಒಂದು ದ್ವಿಚಕ್ರ ವಾಹನ ಹಾಗೂ ಮಿನಿ ಗೂಡ್ಸ್ ವಾಹನಕ್ಕೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದಿದೆ.
ಬಿಎಂಟಿಸಿ ಡಿಪೋ 35ಕ್ಕೆ ಸೇರಿದ KA 51 AK 6230 ಬಸ್ ಅಡಿಕೆ ಹೊಡೆದಿದೆ ಬ್ರೇಕ್ ಫೇಲ್ ಆಗಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಅಪಘಾತವಾಗಿದೆ.ಕೆಆರ್ ಮಾರ್ಕೆಟ್ ಮತ್ತು ತಾವರೆಕೆರೆ ನಡುವೆ ಈ ಒಂದು ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಸಂಚರಿಸುತ್ತಿತ್ತು. ಪ್ರಯಾಣಿಕ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಗಾಯಗಳಾಗಿದ್ದು, ತಕ್ಷಣ ಗಾಯಾಳುಗಳನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಮರಾಜಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








